ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

Published on

ಹಲಗೂರು: ಸಾಲಬಾಧೆ ತಾಳಲಾರದೆ ಸಮೀಪದ ನಂದಿಪುರ ಗ್ರಾಮದ ರೈತನೊಬ್ಬ ವಿಷ ಕುಡಿದು ಆತ್ಮಹತ್ಯೆ ಮಾಡಿದ್ದಾನೆ.
ನಂದಿಪುರ ಗ್ರಾಮದ ನಿವಾಸಿ ಸಿದ್ದೇಗೌಡ (65) ಆತ್ಮಹತ್ಯೆಗೆ ಶರಣಾದ ರೈತ.


ನಂದಿಪುರ ಗ್ರಾಮದ ಲೇಟ್ ನಿಂಗೇಗೌಡರ ಪುತ್ರ ಸಿದ್ದೇಗೌಡ ತಮ್ಮ ಭಾಗದ ಒಂದು ಎಕರೆ ಒಂಬತ್ತು ಗುಂಟೆ ಜಮೀನಿನಲ್ಲಿ ಬೋರ್‌ವೆಲ್ ಕೊರೆಸುವುದಕ್ಕಾಗಿ ಸಹಕಾರ ಸಂಘದಿಂದ 73 ಸಾವಿರ ರೂ., ಹಾಗೂ 3ಲಕ್ಷ ರೂ.ಕೈಸಾಲ ಸೇರಿ ಒಟ್ಟು 4 ಲಕ್ಷ ರೂ.ಸಾಲ ಮಾಡಿದ್ದು, ಜಮೀನಿನಲ್ಲಿ ಹುರುಳಿ ಮತ್ತು ರೇಷ್ಮೆ ಬೆಳೆ ಬೆಳೆದಿದ್ದು ವ್ಯವಸಾಯದಲ್ಲಿ ಲಾಭ ಸಿಗದೆ ಸಾಲ ತೀರಿಸಲು ಆಗದೆ ಮನನೊಂದು ಶುಕ್ರವಾರ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.


ಮನೆಯವರು ತಕ್ಷಣ ಅವರನ್ನು ಹಲಗೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮೃತಪಟ್ಟಿದ್ದಾರೆ.


ಹಲಗೂರು ಠಾಣೆ ಎಎಸ್ಸೈ ಶಿವಣ್ಣ ಕೇಸು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net