

ದೊಡ್ಡಬಳ್ಳಾಪುರ: ಕರೊನಾ ಸೋಂಕಿನ ಭೀತಿಯನ್ನೂ ಲೆಕ್ಕಿಸದೆ ಚಾಮರಾಜಪೇಟೆ ಶಾಸಕ ಮಾಜಿ ಸಚಿವ ಜಮೀರ್ ಅಹಮದ್ ಅವರನ್ನು ಸುತ್ತುವರಿದ ನೂರಾರು ಮಂದಿ ಅವರ ಜತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಇದೇ ವೇಳೆ ಅಭಿಮಾನಿಯೊಬ್ಬ ಜಮೀರ್ ಕೆನ್ನೆಗೆ ಮುತ್ತು ಕೊಟ್ಟಿದ್ದಾನೆ.
ಕರೊನಾ ಲಾಕ್ಡೌನ್ ಹಿನ್ನೆಲೆ ಬಡವರ ಅನುಕೂಲಕ್ಕಾಗಿ ಶಾಸಕ ಟಿ. ವೆಂಕಟರಮಣಯ್ಯ ಅವರು ದೊಡ್ಡಬಳ್ಳಾಪುರದಲ್ಲಿ ಅನ್ನ ದಾಸೋಹ ನಡೆಸುತ್ತಿದ್ದಾರೆ. ಇದನ್ನು ವೀಕ್ಷಿಸಲೆಂದು ಶುಕ್ರವಾರ ಜಮೀರ್ ಅಹ್ಮದ್ ದೊಡ್ಡಬಳ್ಳಾಪುರಕ್ಕೆ ಆಗಮಿಸಿದ್ದರು. ಇದನ್ನೂ ಓದಿರಿ ಕಂದನ ಹೊತ್ತುಕೊಂಡು 90 ಕಿ.ಮೀ. ನಡೆದಳು ಈ ತಾಯಿ: ಕಾರಣವಂತೂ ವಿಚಿತ್ರ!
ಈ ವೇಳೆ ಸಾಮಾಜಿಕ ಅಂತರವನ್ನೂ ಮರೆತ ಅಭಿಮಾನಿಗಳು ಜಮೀರ್ ಜತೆ ಸೆಲ್ಫಿ ತೆಗೆದುಕೊಂಡರು. ಅಲ್ಲೇ ಇದ್ದ ಕಾರೊಂದರ ಮೇಲೆ ತನ್ನ ಫೋಟೋವನ್ನ ಅಭಿಮಾನಿಯೊಬ್ಬ ಹಾಕಿಕೊಂಡಿದ್ದನ್ನ ನೋಡಿದ ಕೂಡಲೇ ಶಾಸಕರು, ತನ್ನ ಕಾರಿನಿಂದ ಕೆಳಗಿಳಿದು ಚಾಲಕನೊಂದಿಗೆ ಮಾತನಾಡುತ್ತಿದ್ದರು. ಆ ವೇಳೆ ಹಲವರು ಶಾಸಕರ ಜತೆ ಫೋಟೋ ತೆಗೆಸಿಕೊಂಡರು. ಆಗ ಅಲ್ಲೇ ಇದ್ದ ಅಭಿಮಾನಿಯೊಬ್ಬ ಫೋಟೋ ತೆಗೆಸಿಕೊಂಡ ಬಳಿಕ ಜಮೀರ್ ಕೆನ್ನೆಗೆ ಮುತ್ತಿಟ್ಟ.