ಹೋಟೆಲ್​ಗೆ ಬೀಗ ಹಾಕಿ ಒಳಗಡೆ ವೇಶ್ಯಾವಾಟಿಕೆ! ಪೊಲೀಸರಿಗೆ ಸಿಕ್ಕಿಬಿದ್ದ 8 ಯುವಕರು, ಇಬ್ಬರು ಯುವತಿಯರು

sex
Published on

ಇಂದೋರ್: ಹೊರಗಿನಿಂದ ನೋಡೋಕೆ ಹೋಟೆಲ್ ಬಂದ್​ ಆದಂತೆ ಕಾಣಿಸುತ್ತಿತ್ತು. ಬಾಗಿಲಿಗೆ ಬೀಗ ಹಾಕಿದ್ದರಿಂದ ಕರೊನಾ ಹಿನ್ನೆಲೆ ಮುಚ್ಚಿರಬೇಕು ಎಂದುಕೊಂಡಿದ್ದರು ಸ್ಥಳೀಯರು. ಆದರೆ ಆ ಹೋಟೆಲ್​ ಒಳಗೆ ನಡೆಯುತ್ತಿತ್ತು ವೇಶ್ಯಾವಾಟಿಕೆ ದಂಧೆ!

ಖಚಿತ ಮಾಹಿತಿ ಮೇಲೆಗೆ ಹೋಟೆಲ್​ ಒಳ ಹೊಕ್ಕ ಪೊಲೀಸರು 7 ಮಂದಿ ಪುರುಷರು ಹಾಗೂ ಐವರು ಯುವತಿಯರನ್ನು ವಶಕ್ಕೆ ಪಡೆದಿದ್ದಾರೆ. ಮುಂಬೈ, ದೆಹಲಿ, ಹೈದ್ರಾಬಾದ್​ನಿಂದ ಯುವತಿಯರನ್ನು ಕರೆಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಾ ಗಿರಾಕಿಗಳನ್ನು ಆಕರ್ಷಿಸುತ್ತಿದ್ದರು. ಇದನ್ನೂ ಓದಿರಿ ಯಾರಿಗೂ ತಿಳಿಯದಂತೆ ಪ್ರೇಯಸಿಯನ್ನ ಮನೆಯಲ್ಲೇ 10 ವರ್ಷ ಅಡಗಿಸಿಟ್ಟಿದ್ದ ಪ್ರಿಯಕರ! ಆ ಕೋಣೆಯ ರಹಸ್ಯ ಬಯಲಾಗಿದ್ದೇ ರೋಚಕ

ಈ ದಂಧೆ ಘಟನೆ ಮಧ್ಯಪ್ರದೇಶದ ಇಂದೋರ್​ನ ಬೊಮ್ಮಾಯಿ ಆಸ್ಪತ್ರೆ ಸಮೀಪದ ಹೋಟೆಲ್​ವೊಂದರಲ್ಲಿ ನಡೆದಿದ್ದು, ದಾಳಿ ಮಾಡಿದ ಪೊಲೀಸರು 8 ಯುವಕರು ಮತ್ತು ಹೈದ್ರಾಬಾದ್​ ಮೂಲದ ಇಬ್ಬರು ಯುವತಿಯರನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳ ಮೊಬೈಲ್ ಕರೆ ವಿವರಗಳು ಮತ್ತು ಹಣಕಾಸು ವಹಿವಾಟಿನ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯುವಕರು ಆರು ಸಾವಿರ ರೂಪಾಯಿ ಪಾವತಿಸಿ ಈ ಹೋಟೆಲ್​ಗೆ ಬರುತ್ತಿದ್ದರು ಎಂದು ಗೊತ್ತಾಗಿದೆ. ಹೋಟೆಲ್​ ಮಾಲೀಕರ ವಿರುದ್ಧವೂ ಕೇಸ್​ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net