ನೋಡ ನೋಡುತ್ತಿದ್ದಂತೆ ರಸ್ತೆ ಮೇಲೆ ನಡೆದು ಬರುತ್ತಿದ್ದ ಜನರ ಮೇಲೆ ಬಿತ್ತು ಮರ! ಮುಂದಾಗಿದ್ದೇನು?

1301775
Published on

ಧಾರವಾಡ: ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಲ್ಲಲ್ಲಿ ಅನಾಹುತಗಳು ನಡೆಯುತ್ತಲೇ ಇವೆ. ಭೂ ಕುಸಿತ, ಮರಗಳು ಧರೆಗುರುಳುವುದು ಸಾಮಾನ್ಯವಾಗಿದೆ. ಭಾರೀ ಮಳೆಯಿಂದಾಗಿ ರಸ್ತೆ ಬದಿಯಲ್ಲಿ ನಿಂತಿದ್ದ ಮರವೊಂದು ರಸ್ತೆ ಮೇಲೆ ಧರೆಗುರುಳಿದೆ. ಮರ ಮಾತ್ರ ಬಿದ್ದಿದ್ದರೆ ಏನೂ ಆಗುತ್ತಿರಲಿಲ್ಲ. ಮರ ಬಿದ್ದ ವೇಳೆಯೇ ಕೆಲ ಜನರು ನಡೆದುಕೊಂಡು ಹೋಗುತ್ತಿದ್ದರು. ಇವರ ಗ್ರಹಚಾರ ಆಗಲೇ ಕೆಟ್ಟಿದೆ ಎಂಬಂತೆ ಇವರ ಮೇಲೆಯೇ ಮರ ಬಿದ್ದೇ ಬಿಟ್ಟಿತ್ತು.

ಈ ಬೆಚ್ಚಿ ಬೀಳಿಸುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೂರು ದಿನದ ಹಿಂದೆ ಈ ಮರ ಬಿದ್ದಿದ್ದು, ಸದ್ಯ ದೃಶ್ಯ ನೋಡಿದವರಿಗೆ ಶಾಕ್​ ಆಗಿದೆ. ಅಂದಹಾಗೆ ನಡೆದು ಬರುತ್ತಿದ್ದ ಜನರ ಮೇಲೆಯೇ ಮರ ಬಿದ್ದಿದೆ, ಅದೃಷ್ಟವಶಾತ್​ ಜನರು ಓಡಿಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ ಇಬ್ಬರು ಮಾತ್ರ ಅಲ್ಲೇ ಸಿಲುಕಿಕೊಂಡಿದ್ದರು.

ಮರದ ಕೊಂಬೆಯ ಎಲೆಗಳಿರುವ ಭಾಗ ಬಿದ್ದಿದ್ದರಿಂದ ಈ ಇಬ್ಬರೂ ಸಯ ದೇವರ ದಯೆಯಿಂದ ಬಚಾವ್​ ಆಗಿದ್ದಾರೆ. ಸದ್ಯ ಭಾರೀ ಗಾತ್ರದ ಮರ ಬಿದ್ದರೂ ಒಬ್ಬರಿಗೂ ಹಾನಿಯಾಗದಿರುವುದು ಅದೃಷ್ಟವೇ ಸರಿ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net