ಕೊಡಗು ಜಿಲ್ಲೆಯಲ್ಲಿ ಮತ್ತೆ ಭೂಕಂಪನ, ಬೆಚ್ಚಿಬಿದ್ದ ಜನ: ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 3.0 ದಾಖಲು

earthquake
Published on

ಕೊಡಗು: ಮಡಿಕೇರಿ ತಾಲೂಕಿನ ಹಲವೆಡೆ ಮಂಗಳವಾರ ಬೆಳಗ್ಗೆ 7.45ಕ್ಕೆ ಲಘು ಭೂಕಂಪನ ಸಂಭವಿಸಿದ್ದು, ಇದರ ಪ್ರಭಾವ ಸುಳ್ಯ ತಾಲೂಕಿನ ಹಲವೆಡೆ ಭೂಮಿ ಕಂಪಿಸಿದ ಅನುಭವ ಆಗಿದೆ. ಜನತೆ ಬೆಚ್ಚಿಬಿದ್ದಿದ್ದಾರೆ.

ಲಘು ಭೂಕಂಪನ ಕುರಿತು ಕರ್ನಾಟಕ ರಾಜ್ಯ ನ್ಯಾಚುರಲ್ ಡಿಸಾಸ್ಟರ್ ಮಾನಿಟರಿಂಗ್ ಸೆಂಟರ್ ಅಧಿಕೃತ ಬುಲೆಟಿನ್ ಬಿಡುಗಡೆಗೊಳಿಸಿದ್ದು, ಇದರ ಪ್ರಕಾರ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಂಬು ಗ್ರಾಮ ಸಮೀಪ ಭೂಕಂಪನ ಉಂಟಾಗಿದ್ದು ರಿಕ್ಟರ್ ಸ್ಕೇಲ್‌ನಲ್ಲಿ ಭೂಕಂಪನದ ತೀವ್ರತೆ 3.0 ದಾಖಲಾಗಿದೆ.

ಮಂಗಳವಾರ ಬೆಳಗ್ಗೆ 7 ಗಂಟೆ 45 ನಿಮಿಷ 47 ಸೆಕೆಂಡಿಗೆ ಈ ಭೂಕಂಪನ ದಾಖಲಾಗಿದೆ. 5.2 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಭೂಕಂಪನ ಸಂಭವಿಸಿದ್ದು, ಇದರ ಪ್ರಭಾವದಿಂದ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಹಾಗೂ ಕೊಡಗು ಜಿಲ್ಲೆಯ ಕೊಡಗು ಸಂಪಾಜೆ, ಚೆಂಬು, ಕರಿಕೆ, ಪೆರಾಜೆ ಪ್ರದೇಶ ಸೇರಿ ವಿವಿಧ ಭಾಗಗಳಲ್ಲಿ ಭೂಮಿ ಕಂಪಿಸಿದೆ ಎಂದು ವರದಿ ತಿಳಿಸಿದೆ. ಎರಡು ದಿನದ ಹಿಂದೆ ಸಂಭವಿಸಿದ ಭೂಕಂಪನಕ್ಕಿಂತ ಹೆಚ್ಚು ತೀವ್ರತೆಯ ಭೂಕಂಪನ ಇದಾಗಿದೆ. ಜೂ.25ರಂದು ಸಂಭವಿಸಿದ ಭೂಕಂಪನ ಕರಿಕೆ ಸಮೀಪದಲ್ಲಿ ಸಂಭವಿಸಿದ್ದು, ರಿಕ್ಟರ್ ಸ್ಕೇಲ್‌ನಲ್ಲಿ 2.3 ದಾಖಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net