ನಾನು ನಕಲಿ ಜಾತಿ ಪ್ರಮಾಣ ಪತ್ರ ಪಡೆದಿದ್ದರೆ ನೇಣಿಗೇರುವೆ: ಸದನದಲ್ಲಿ ರೇಣುಕಾಚಾರ್ಯ ಸವಾಲು

renukacharya
Published on

ಬೆಂಗಳೂರು: ನಾನು ಯಾವುದೇ ನಕಲಿ ಜಾತಿ ಸರ್ಟಿಫಿಕೇಟ್ ಪಡೆದಿಲ್ಲ. ನಾನು ಜಾತ್ಯತೀತ ವ್ಯಕ್ತಿ. ನಕಲಿ ಸರ್ಟಿಫಿಕೇಟ್​ ಪಡೆದು ಅದರ ಲಾಭ ಪಡೆದಿದ್ರೆ ನನ್ನನ್ನು ನೇಣಿಗೆ ಹಾಕಿ ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅಸಮಾಧಾನ ಹೊರಹಾಕಿದರು.

ರೇಣುಕಾಚಾರ್ಯ ಅವರ ಪುತ್ರಿ ಎಸ್​ಸ್ಸಿ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ವಿಧಾನಸೌಧದಲ್ಲಿ ಕಲಾಪ ವೇಳೆ ಬುಧವಾರ ಜಟಾಪಟಿಯೂ ನಡೆಯಿತು. ಸ್ಪಷ್ಟನೆ ನೀಡಿದ  ರೇಣುಕಾಚಾರ್ಯ, ನನ್ನ ಸೋದರ ನನ್ನ ಮಗಳಿಗೂ ಜಾತಿ ಪ್ರಮಾಣ ಪತ್ರ ಕೊಡಿಸಿದ್ದ. ಆ ಪತ್ರವನ್ನ ನಾನೇ ವಾಪಸ್​ ಮಾಡಿಸಿರುವೆ. ನನ್ನ ತಂಗಿ ಕಲಬುರಗಿಯಲ್ಲಿ ಉಮೇಶ್ ಜಾದವ್ ವಿರುದ್ಧ ಸ್ಪರ್ಧೆ ಮಾಡಿದಾಗ ನಾನೇ ಇದನ್ನ ತಕರಾರು ಮಾಡಿದೆ. ನನಗೆ ಕೆಟ್ಟ ಹೆಸರು ಬರುತ್ತೆ ಮೊದಲು ವಾಪಸು ತೆಗೆಯಿರಿ ಎಂದು ಹೇಳಿದ್ದೆ. ನಾನು ಜಾತಿ ಸಂಬಂಧ ಯಾವುದೇ ನಕಲಿ ಸರ್ಟಿಫಿಕೇಟ್ ಪಡೆದು ಯಾವುದೇ ಸವಲತ್ತು ಪಡೆದಿಲ್ಲ. ಪಡೆದಿದ್ರೆ ನೇಣಿಗೇರಲು ನಾನು ಸಿದ್ಧ ಎಂದರು. ಹಾಗೇನಾದರೂ ರೇಣುಕಾಚಾರ್ಯರು ನಕಲಿ ಸರ್ಟಿಫಿಕೇಟ್ ಪಡೆದಿದ್ರೆ ಸಂಬಂಧಪಟ್ಟವರಿಗೆ ದೂರು ಕೊಟ್ಟರೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಚಿವ ಮಾಧುಸ್ವಾಮಿ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net