

ಹಾವೇರಿ: ಮನೆಯಂಗಳಲ್ಲಿ ಮಲಗಿದ್ದ ಸಾಕುನಾಯಿಯೊಂದನ್ನು ಚಿರತೆಯೊಂದು ಹೊತ್ತೊಯ್ದು ತಿಂದು ತೇಗಿರುವ ಘಟನೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ತೋಟಗಂಟಿ ಗ್ರಾಮದಲ್ಲಿ ಶನಿವಾರ ನಸುಕಿನ ಜಾವ ನಡೆದಿದೆ.
ತೋಟಗಂಟಿ ಗ್ರಾಮದ ಬಸವಣ್ಣೆಪ್ಪ ಬೋವೆರ್ ಎಂಬುವವರಿಗೆ ಸೇರಿದ ನಾಯಿ ಇದಾಗಿತ್ತು. 20 ಸಾವಿರ ಮೌಲ್ಯದ ಡಾಬರ್ ಮನ್ ಹೆಸರಿನ ಶ್ವಾನ ಚಾಲಾಕಿ ಚಿರತೆ ದಾಳಿಗೆ ಬಲಿಯಾಗಿದೆ. ನಾಯಿಯ ಕಳೆಬರಹ ಗ್ರಾಮದ ಹೊರವಲಯದಲ್ಲಿ ಪತ್ತೆಯಾಗಿದೆ.
ಅರಣ್ಯಾಧಿಕಾರಿಗಳಿಗೆ ನಷ್ಟ ಭರಿಸುವಂತೆ ಬೇಡಿಕೆ ಸಲ್ಲಿಸಿರುವ ನಾಯಿ ಮಾಲೀಕರು, ಚಿರತೆ ದಾಳಿಯಿಂದ ಮನುಷ್ಯರನ್ನ ಮತ್ತು ಪ್ರಾಣಿಗಳನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರೆ. ಈ ಕುರಿತು ರಟ್ಟಿಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.