ನಿರ್ವಹಣೆ ಇಲ್ಲದೆ ಪಾಳುಬಿದ್ದ ತಂಗುದಾಣ

ಮಸ್ಕಿ ತಾಲೂಕಿನ ಬುದ್ದಿನ್ನಿ ಗ್ರಾಮದ ಬಸ್ ತಂಗುದಾಣದ ದುಸ್ಥಿತಿ.
ಮಸ್ಕಿ ತಾಲೂಕಿನ ಬುದ್ದಿನ್ನಿ ಗ್ರಾಮದ ಬಸ್ ತಂಗುದಾಣದ ದುಸ್ಥಿತಿ.
Published on

ಮಸ್ಕಿ: ತಾಲೂಕಿನ ಬುದ್ದಿನ್ನಿ ಗ್ರಾಮದ ಬಸ್ ಪ್ರಯಾಣಿಕರ ತಂಗುದಾಣ ನಿರ್ವಹಣೆ ಕೊರತೆಯಿಂದ ಪಾಳು ಬಿದ್ದು, ಬೀಳುವ ಹಂತ ತಲುಪಿದೆ.

ಗೌಡನಬಾವಿ ಗ್ರಾಪಂ ವ್ಯಾಪ್ತಿಯ ಬುದ್ದಿನ್ನಿಯಲ್ಲಿ 30 ವರ್ಷಗಳ ಹಿಂದೆ ನಿರ್ಮಿಸಲಾದ ಬಸ್ ತಂಗುದಾಣ ಕಟ್ಟಡ ಶಿಥಿಲಗೊಂಡಿದ್ದು, ಛಾವಣಿ ಬೀಳುವಂತಿದೆ. ಕಬ್ಬಿಣದ ಸರಳುಗಳು ಹೊರ ಬಂದಿದ್ದು, ಸಾರ್ವಜನಿಕರು ಸರಿಯಾಗಿ ಬಳಸದ ಕಾರಣ ಎಲ್ಲೆಂದರಲ್ಲಿ ಕಸ ಬಿದ್ದು ತಿಪ್ಪೆ ಗುಂಡಿಯಾಗಿದೆ. ಮದ್ಯದ ಬಾಟಲಿ ಹಾಗೂ ಪೌಚ್‌ಗಳು ಚೆಲ್ಲಾಪಿಲ್ಲಿಯಾಗಿ ರಾಶಿಗಟ್ಟಲೆ ಬಿದ್ದಿದೆ. ಆದರೂ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗಮನ ಹರಿಸುತ್ತಿಲ್ಲ.

ಬಸ್ ತಂಗುದಾಣ ಶಿಥಿಲಗೊಂಡಿದೆ. ನಿರ್ಮಾಣದ ಹಂತದಲ್ಲಿ ಸುಣ್ಣ-ಬಣ್ಣ ಕಂಡಿದ್ದು, ಮತ್ತೆ ಬಳಿದಿಲ್ಲ. ಮಳೆ ಬಂದರೆ ಸೋರುತ್ತದೆ. ಅಪಾಯ ಸಂಭವಿಸುವ ಮುನ್ನ ಸಂಬಂಧಿಸಿದವರು ಗಮನ ಹರಿಸಿ ಕಟ್ಟಡ ತೆರವುಗೊಳಿಸಿ ಹೊಸ ಬಸ್ ತಂಗುದಾಣ ನಿರ್ಮಿಸಬೇಕು ಎಂದು ಗ್ರಾಮದ ಎಂ.ಗಂಗಾಧರ ಸೇರಿ ಇತರರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net