ಮ.ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಭಕ್ತನಿಗೆ ಬೈಕ್ ಡಿಕ್ಕಿ

ಮ.ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಭಕ್ತನಿಗೆ ಬೈಕ್ ಡಿಕ್ಕಿ
Published on

ಹನೂರು: ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಮಾದಪ್ಪನ ಭಕ್ತರೊಬ್ಬರಿಗೆ ಭಾನುವಾರ ಹನೂರು ಎಲ್ಲೇಮಾಳ ಮಾರ್ಗದಲ್ಲಿ ಬೈಕ್ ಡಿಕ್ಕಿ ಸಂಭವಿಸಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಂಡ್ಯದ ನಿವಾಸಿ ಸತೀಶ್ (30) ಗಾಯಗೊಂಡವರು. 2 ದಿನಗಳಿಂದ ಗ್ರಾಮಸ್ಥರೊಂದಿಗೆ ಮ.ಬೆಟ್ಟಕ್ಕೆ ಕಾಲ್ನಡಿಗೆ ಯಾತ್ರೆ ಹೊರಟಿದ್ದರು. ಬೆಳಗ್ಗೆ 8ರ ವೇಳೆಯಲ್ಲಿ ಹನೂರಿನಿಂದ ಪಯಣ ಆರಂಭಿಸಿದ್ದರು. ಈ ವೇಳೆ ಎಲ್ಲೇಮಾಳ ಮಾರ್ಗಮಧ್ಯೆ ಬೈಕ್ ಡಿಕ್ಕಿ ಹೊಡೆದಿದೆ. ಕಾಲಿಗೆ ತೀವ್ರ ಗಾಯಗೊಂಡ ಇವರನ್ನು ಜತೆಗಾರರು ಸಮೀಪದ ಕಾಮಗೆರೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರು. ಸುದ್ದಿ ತಿಳಿದು ಹನೂರು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಮಾಹಿತಿ ಪಡೆದಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net