ಆದಿಚುಂಚನಗಿರಿಯಲ್ಲಿ ಶರನ್ನವರಾತ್ರಿ: ಉತ್ಸವ ಪೂಜೆಗೆ ನಿರ್ಮಲಾನಂದನಾಥ ಶ್ರೀ ಚಾಲನೆ

adichunchanagiri dasara
Published on

ನಾಗಮಂಗಲ: ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಕಾಲಭೈರವೇಶ್ವರಸ್ವಾಮಿ ಸನ್ನಿಧಿಯಲ್ಲಿ ಶರನ್ನವರಾತ್ರಿಯ ಉತ್ಸವದ ಮೊದಲನೇ ದಿನವಾದ ಗುರುವಾರ ರಾತ್ರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿಶೇಷ ಪೂಜೆ ನೆರವೇರಿತು.

ನವರಾತ್ರಿ ಅಂಗವಾಗಿ ಪ್ರತಿದಿನ ಮುಂಜಾನೆ ಕಾಲಭೈರವೇಶ್ವರಸ್ವಾಮಿ, ಮಾಳಮ್ಮದೇವಿ, ಆದಿಶಕ್ತಿ ಸ್ತಂಭಾಭಿಕೆದೇವಿ ಸೇರಿದಂತೆ ಕ್ಷೇತ್ರಗಳ ಎಲ್ಲ ದೇವರಿಗೆ ವಿಶೇಷ ಪೂಜೆಗಳು ನಡೆದವು.

ಸರ್ವಾಲಂಕೃತಗೊಂಡ ಸಿಂಹಾಸನದಲ್ಲಿ ಶ್ರೀಗಳನ್ನು ಕೂರಿಸಿ, ಚಿನ್ನದ ಕಿರೀಟಧಾರಣೆ  ಚಿನ್ನಲೇಪಿತ ಶಾಲು ಹೊದಿಸಿ ಗುರುಪೀಠದಲ್ಲಿ ಕೂರಿಸಿ ಷೋಡೋಶೋಪಚಾರ ಪೂಜೆ ಸಲ್ಲಿಸಲಾಯಿತು. ಪೂಜೆಯ ನಂತರ ನೆರೆದಿದ್ದ ಭಕ್ತರಿಗೆ ಆಶೀರ್ವಚನ ನೀಡಲಾಯಿತು.

ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಚೈತನ್ಯನಾಥ ಸ್ವಾಮೀಜಿ, ವಿವಿಧ ಶಾಖಾ ಮಠಗಳ ಸ್ವಾಮೀಜಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net