ನಿರ್ಮಾಪಕರನ್ನು ನಾನು ಬಿಟ್ಟು ಕೊಡಲ್ಲ, ಈ ಕೇಸ್​ಗೆ ಮಂಗಳ ಹಾಡಲಾಗಿದೆ: ನಟ ದರ್ಶನ್​

darshan
Published on

ಬೆಂಗಳೂರು: ನಟ ದರ್ಶನ್ ಹೆಸರಲ್ಲಿ ಹಣ ವಂಚನೆ ಯತ್ನ ಪ್ರಕರಣಕ್ಕೆ ಮತ್ತೊಂದು ಸ್ಫೋಟಕ ತಿರುವು ಸಿಕ್ಕಿದೆ. ಆರಂಭದಲ್ಲಿ ನಿರ್ಮಾಪಕ ಉಮಾಪತಿ ಮೇಲೆ ಅನುಮಾನ ಮೂಡಿತ್ತಾದರೂ ನಂತರದ ಬೆಳವಣಿಗೆಯಲ್ಲಿ ಈ ಪ್ರಕರಣದ ಪ್ರಮುಖ ಕೇಂದ್ರಬಿಂದು ಆರೋಪಿ ಅರುಣಾಕುಮಾರಿ ಎನ್ನಲಾಗುತ್ತಿದೆ. ಇದೀಗ ನಟ ದರ್ಶನ್​ ಕೂಡ 'ಈ ಕೇಸ್​ಗೆ ಈಗಾಗಲೇ ಮಂಗಳ ಹಾಡಿ ಆಗಿದೆ' ಎನ್ನುವ ಮೂಲಕ ನಿರ್ಮಾಪಕ ಉಮಾಪತಿಯನ್ನು ಬಿಟ್ಟುಕೊಟ್ಟಿಲ್ಲ.

'ನಿರ್ಮಾಪಕರನ್ನು ನಾನು ಬಿಟ್ಟು ಕೊಡುವುದಿಲ್ಲ. ಉಮಾಪತಿ ಇವತ್ತಿಗೂ ನಮ್ಮ ನಿರ್ಮಾಪಕರೇ. ನಾನು ಉಮಾಪತಿ ಜತೆ ಮಾತನಾಡಿದ್ದೇನೆ. ಇದೇನು ಮಕ್ಕಳ ಆಟವಲ್ಲ...' ಎನ್ನುವ ಮೂಲಕ ಉಮಾಪತಿ ಪರ ದರ್ಶನ್​ ಮಾತನಾಡಿದ್ದಾರೆ.

'ಇದರಲ್ಲಿ ನಿರ್ಮಾಪಕ ಉಮಾಪತಿಯ ಪಾತ್ರ ಏನೂ ಇಲ್ಲ. ಇದರ ಹಿಂದೆ ಬೇರೆ ಯಾರೋ ಇದ್ದಾರೆ. ಯಾವ ಹೆಣ್ಣು ಮಕ್ಕಳೂ ಇಂಥ ಕೆಲಸ ಮಾಡಲು ಬರಲ್ಲ. ಉಮಾಪತಿಯನ್ನು ಏಕೆ ಟಾರ್ಗೆಟ್ ಮಾಡುತ್ತೀರಿ. ಈ ವಿಷಯದಲ್ಲಿ ಇಲ್ಲಿ ಯಾರೂ ಕೈ ಕಟ್ಟಿ ಕೂತಿಲ್ಲ. ಆ ಮಹಿಳೆಗೆ ಇಷ್ಟೊಂದು ಧೈರ್ಯ ಎಲ್ಲಿಂದ ಬಂತು?' ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net