ಅಪ್ಪನ ಪಾರ್ಥಿವ ಶರೀರವನ್ನು ಸೇನಾ ಸಮವಸ್ತ್ರ ಹಾಕಿಕೊಂಡು ಸ್ವೀಕರಿಸಿದ ಮಗ!

1136334
Published on

ಬೆಳಗಾವಿ: ನಾಗಾಲ್ಯಾಂಡ್​ನಲ್ಲಿ ಸಂಭವಿಸಿದ ಅಪಘಾತದಲ್ಲಿ ಗೋಕಾಕ್​ ತಾಲೂಕಿನ ಶಿವಾಪುರ ಗ್ರಾಮದ ಯೋಧ ಮಂಜುನಾಥ ಗೌಡನ್ನವರ ಹುತಾತ್ಮರಾದರು. ಸ್ವಗ್ರಾಮಕ್ಕೆ ಬಂದ ಪಾರ್ಥಿವ ಶರೀರವನ್ನು ಹುತಾತ್ಮ ಯೋಧನ ಪುಟ್ಟ ಮಗ ಸೇನೆಯ ಸಮವಸ್ತ್ರಧಾರಿಯಾಗಿಯೇ ಸ್ವೀಕರಿಸಿದ್ದು, ನೆರೆದಿದ್ದವರ ಮನಕಲಕುವಂತಿತ್ತು.

ನಾಗಾಲ್ಯಾಂಡ್​ನಲ್ಲಿ ಕರ್ತವ್ಯ ನಿರತರಾಗಿದ್ದ ವೇಳೆ ಭಾನುವಾರ ಅಪಘಾತ ಸಂಭವಿಸಿ ಯೋಧ ಮಂಜುನಾಥ ಗೌಡನ್ನವರ ಮೃತಪಟ್ಟಿದ್ದರು. ಅವರ ಪಾರ್ಥಿವ ಶರೀರ ಗ್ರಾಮಕ್ಕೆ ಬರುತ್ತಿದ್ದಂತೆ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು.

ಅಪ್ಪನಂತೆ 5 ವರ್ಷದ ಮಗ ಸ್ವರೂಪ್ ಸೇನೆಯ ಸಮವಸ್ತ್ರ ಧರಿಸಿ ಅಪ್ಪನ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ. ಪುಟ್ಟ ಕಂದನನ್ನು ನೋಡಿ ಶಿವಾಪುರ ಗ್ರಾಮದ ಜನರು ಮಮ್ಮಲ ಮರುಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net