ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸಿಲಿಂಡರ್​ ಸ್ಫೋಟ, 6 ಮಂದಿಗೆ ಗಾಯ

kempegowda international airport fire accident
Published on

ಬೆಂಗಳೂರು: ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಲಿಂಡರ್​ ಸ್ಫೋಟಗೊಂಡಿದ್ದು, 6 ಕಾರ್ಮಿಕರು ಗಾಯಗೊಂಡಿದ್ದಾರೆ.

ಕೆಐಎಎಲ್(ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ)ನ ಎರಡನೇ ಟರ್ಮಿನಲ್​ಗಾಗಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಕಾರ್ಗೋ ಕಾಂಪ್ಲೆಕ್ಸ್ ಮುಂಭಾಗದ ರಸ್ತೆಯಲ್ಲಿನ ಅಂಡರ್ ಪಾಸ್ ಒಳಗೆ ರಸ್ತೆಗೆ ಕಪ್ಪು ಬಿಳಿ ಸೂಚಕ ಸಂಕೇತಗಳ ಪಟ್ಟಿ ಅಳವಡಿಸು ಕೆಲಸ ನಡೆಯುತ್ತಿತ್ತು, ಆ ವೇಳೆ ಬಣ್ಣವನ್ನು ಸಿಲಿಂಡರ್ ಮೂಲಕ ಕಾರ್ಮಿಕರು ಬಿಸಿ ಮಾಡುತ್ತಿದ್ದರು. ಆಗ ಸಿಲಿಂಡರ್​ ಸ್ಫೋಟಗೊಂಡಿದೆ.

ಸ್ಪೋಟದ ರಭಸಕ್ಕೆ ಬಣ್ಣಗಳ ದಾಸ್ತಾನು, ಕ್ಯಾಂಟರ್​ಗೂ ಬೆಂಕಿ ತಗುಲಿ ಹೊತ್ತಿ ಉರಿದಿದೆ. ಈ ಘಟನೆಯಲ್ಲಿ ಕಾರ್ಮಿಕರಾದ ಅವಿನಾಶ್, ಸಿರಾಜ್, ಅಜಯ್, ನಾಗೇಶ್ ರಾವ್, ಪ್ರಶಾಂತ್, ಗೌತಮ್ ಗಾಯಗೊಂಡಿದ್ದು, ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net