ಬಿಡಾಡಿ ದನಗಳ ಹಾವಳಿಗೆ ಬೀಳದ ಕಡಿವಾಣ

3-KGL-2,,,,,
ಕೊಳ್ಳೇಗಾಲ ಪಟ್ಟಣದ ಡಾ.ಆರ್.ಅಂಬೇಡ್ಕರ್ ರಸ್ತೆಯಲ್ಲಿ ವಾಹನಗಳಿಗೆ ದಾರಿ ಬಿಡದೆ ಬಿಡಾಡಿ ದನ ಸಂಚಾರ ಮಾಡು ತ್ತಿರುವುದ್ದರಿಂದ ಸಂಚಾರಕ್ಕೆ ತೊಂದರೆಯಾಗಿರುವುದು.
Published on

ಕೊಳ್ಳೇಗಾಲ: ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿಗೆ ಕಡಿವಾಣ ಬೀಳದೆ ಜನ ಸಾಮಾನ್ಯರಿಗೆ ತೊಂದರೆಯಾಗಿದೆ. ಇದರ ತಡೆಗೆ ಮುಂದಾಗಿರುವ ನಗರಸಭೆ ಕ್ರಮ ಮಾತ್ರ ಪ್ರಕಟಣೆಗೆ ಸಿಮೀತವಾಗಿದೆ.

ದಿನ ಬೆಳಗಾದರೆ ಬಿಡಾಡಿ ದನಗಳ ಆತಂಕದಲ್ಲಿಯೇ ಜನರು ಜೀವಿಸುವ ಪರಿಸ್ಥಿತಿ ಪಟ್ಟಣದಲ್ಲಿದೆ. ಡಾ.ಬಿ. ಆರ್.ಅಂಬೇಡ್ಕರ್ ರಸ್ತೆ ಹಾಗೂ ವಿಷ್ಣುವರ್ಧನ್ ರಸ್ತೆ, ರಾಜ್ ಕುಮಾರ್ ರಸ್ತೆ, ಮುಳ್ಳೂರು ರಸ್ತೆ ಇನ್ನಿತರ ರಸ್ತೆಯಲ್ಲಿ ಸಾಮಾನ್ಯವಾಗಿ ಬಿಡಾಡಿ ದನಗಳು ಸಾಮಾನ್ಯವಾಗಿ ಕಾಣಸಿಗುತ್ತವೆ.

ನಡು ರಸ್ತೆಯಲ್ಲಿಯೇ ಬೀಡುಬಿಡುವ ದನಗಳಿಂದ ವಾಹನ ಸವಾರರು ರೋಸಿ ಹೋಗಿದ್ದಾರೆ. ಸ್ಥಳಾವಕಾಶಕ್ಕೆ ಶಬ್ದ ಮಾಡಿದರೆ ಯಾರ ಮೇಲೆ ಎಗರುವುದೋ ತಿಳಿಯುವುದಿಲ್ಲ. ದ್ವಿಚಕ್ರ ವಾಹನಗಳು, ಪಾದಚಾರಿಗಳು, ಶಾಲೆಗೆ ತೆರಳುವ ಮಕ್ಕಳು ಪ್ರತಿ ನಿತ್ಯವೂ ಈ ಸಮಸ್ಯೆಯಿಂದ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ನಗರಸಭೆಗೆ ದೂರು ಬಂದಿದೆ. ಆದರೂ ಪ್ರಯೋಜ ನವಾಗಿಲ್ಲ. ಪ್ರಕಟಣೆಯಲ್ಲಿ ಮಾತ್ರ ರಸ್ತೆಗೆ ದನಗಳನ್ನು ಬಿಡುವವವರ ಮೇಲೆ ಕ್ರಮ ಕೈಗೊಂಡಿದೆ. ವಿನಾ ಇದರಿಂದ ರಸ್ತೆಯಲ್ಲಿ ಬಿಡಾಡಿ ದನಗಳು ಓಡಾಡುವುದನ್ನು ನಿಲ್ಲಿಸಲು ಸಾಧ್ಯವಾಗಿಲ್ಲ.

ರಸ್ತೆಯಲ್ಲೆ ಮಲಗುವುದು: ರಸ್ತೆ ಬಳಿ ಮಾರಾಟ ಮಾಡುವ ಸೊಪ್ಪು, ತರಕಾರಿಯನ್ನು ರಸ್ತೆಗೆ ಎಸೆಯಲಾಗುತ್ತದೆ. ಇದೇ ಬಿಡಾಡಿ ದನಗಳ ಆಹಾರವಾಗಿದೆ. ದನಗಳ ಮಾಲೀಕರು ಬೆಳಗ್ಗೆ ರಸ್ತೆಗೆ ಬಿಟ್ಟರೆ ದಿನವಿಡೀ ಅಡ್ಡಾಡುವ ದನಗಳು ರಸ್ತೆ ಮಧ್ಯದಲ್ಲೇ ನಿದ್ರೆಗೆ ಜಾರುತ್ತವೆ. ಈ ವೇಳೆ ಸಂಚಾರಕ್ಕೆ ತೊಂದರೆ ಯಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net