ಕಾಳಿ ನದಿ ಬಿಟ್ಟು ರಸ್ತೆಗೆ ಬಂದ ಮೊಸಳೆ!

01DND1
Published on

ದಾಂಡೇಲಿ: ನಗರ ಸಮೀಪದ ಕೋಗಿಲಬನ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಮೊಸಳೆಯೊಂದು ಪ್ರತ್ಯಕ್ಷವಾಗಿ ಜನರಲ್ಲಿ ಆತಂಕ ಸೃಷ್ಟಿಸಿತ್ತು.
ಕೋಗಿಲಬನ ಗ್ರಾಮದ ಸಮೀಪವೇ ಕಾಳಿ ನದಿ ಹಾಗೂ ಮೊಸಳೆ ಪಾರ್ಕ್ ಇರುವುದರಿಂದ ಮೊಸಳೆ ಹೊರಬಂದು ಸುಮಾರು ಅರ್ಧಗಂಟೆಗೂ ಹೆಚ್ಚು ಹೊತ್ತು ರಸ್ತೆಯಲ್ಲಿ ಸಂಚರಿಸಿತು. ಯಾರಿಗೂ ತೊಂದರೆ ಕೊಡದೆ ತನ್ನಷ್ಟಕ್ಕೆ ಮರಳಿ ನದಿ ಸೇರಿತು.
ದಾಂಡೇಲಿಯ ಮೊಸಳೆ ಪಾರ್ಕ್​ನಲ್ಲಿ ನೂರಾರು ಮೊಸಳೆಗಳಿವೆ. ಆದರೆ, ಜನವಸತಿ ಪ್ರದೇಶಕ್ಕೆ ಮೊಸಳೆ ನುಗ್ಗಿದ್ದು, ಇದೇ ಮೊದಲು.

ದಾಂಡೇಲಿಯ ಕೋಗಿಲಬನ ಜನವಸತಿ ಪ್ರದೇಶದಲ್ಲಿ ಮೊಸಳೆ ರಸ್ತೆಗೆ ಆಗಮಿಸಿ ಮರಳಿ ನದಿಗೆ ಹಿಂತಿರುಗಿದೆ. ಯಾರೂ ನದಿಯ ದಂಡೆಯಲ್ಲಿ ಯಾವುದೇ ರೀತಿಯ ಕಸ ಅಥವಾ ಅಡುಗೆ ಪದಾರ್ಥಗಳ ತ್ಯಾಜ್ಯ ಎಸೆಯಬೇಡಿ. ಮೊಸಳೆಯು ಈ ಪದಾರ್ಥಗಳ ವಾಸನೆಗೆ ರಸ್ತೆಗೆ ಬರುವ ಸಾಧ್ಯತೆ ಇದೆ. ರಾತ್ರಿ ಹಾಗೂ ನಸುಕಿನಜಾವ ಕಡ್ಡಾಯವಾಗಿ ಟಾರ್ಚ್ ಅಥವಾ ಬೆಳಕು ನೀಡುವ ಸಾಧನಗಳನ್ನು ಬಳಸಿ ಎಚ್ಚರದಿಂದ ಇರಬೇಕು.
| ಡಾ. ಅಜ್ಜಯ್ಯ ಜಿ.ಎಲ್., ಡಿಎಫ್​ಒ ಹಳಿಯಾಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net