ಕೊಡಗಿನಿಂದ ವಾಪಸಾಗುವಾಗ ಬೆಂಗಳೂರು& ಮೈಸೂರು ಎಕ್ಸ್ಪ್ರೆಸ್ ಹೈವೇಯಲ್ಲಿ ಅವಡ
ಚನ್ನಪಟ್ಟಣ: ಬೆಂಗಳೂರು& ಮೈಸೂರು ಎಕ್ಸ್ಪ್ರೆಸ್ ಹೈವೇಯ ಕೋಮನಹಳ್ಳಿ ಬಳಿ ಮಂಗಳವಾರ ಕಾರು ಮತ್ತು ಸರಕು ಸಾಗಣೆ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೆಂಗಳೂರಿನ ಬಾಗಲಗುಂಟೆ ಮನಿಕೊಂಡಪ್ಪ ಲೇಔಟ್ ನಿವಾಸಿಗಳಾದ ಸೋಮಯ್ಯ (73) ಹಾಗೂ ಸರಸ್ವತಿ (65) ಮೃತರು. ಕಾರು ಚಲಾಯಿಸುತ್ತಿದ್ದ ಪುತ್ರ ಪವನ್ (35) ಎಂಬುವರು ಗಾಯಗೊಂಡಿದ್ದು, ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಂಪತಿ ಮೃತದೇಹಗಳನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀೆ ನಡೆಸಿ, ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲತ@ ಕೊಡಗಿನವರಾದ ಸೋಮಯ್ಯ ಕುಟುಂಬ ಬೆಂಗಳೂರಿನಲ್ಲಿ ವಾಸವಿದ್ದು, ಕಾರ್ಯನಿಮಿತ್ತ ಊರಿಗೆ ಬಂದು ವಾಪಸಾಗುವಾಗ ದುರ್ಟನೆ ಸಂಭವಿಸಿದೆ. ಕಾರಿನ ಮುಂದೆ ಸಾಗುತ್ತಿದ್ದ ಗೂಡ್ಸ್ ವಾಹನದ ಚಕ್ರ ಕಳಚಿಕೊಂಡಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.