

ಮಂಗಳೂರು: ಕರೊನಾ ಸಂಕಷ್ಟ ಕಾಲದಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸೋಂಕು ಮಣಿಸಲು ಹೋರಾಡುತ್ತಿದ್ದಾರೆ ಕರೊನಾ ವಾರಿಯರ್ಸ್. ಅಂತಹವರಿಗೆ ಕೈ ಮುಗಿಯಬೇಕು. ಆದರೆ ಇಲ್ಲಿಬ್ಬರು ಅವರ ಮೇಲೆಯೇ ಹಲ್ಲೆ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಸರಪಾಡಿಯಲ್ಲಿ ಮಹಿಳೆಯೊಬ್ಬರಿಗೆ ಕರೊನಾ ಪಾಸಿಟಿವ್ ಬಂದಿದೆ. ಈ ವಿಚಾರ ತಿಳಿದು ಸಿಟ್ಟಿಗೆದ್ದ ಕರೊನಾ ಸೋಂಕಿತೆಯ ಸಂಬಂಧಿಗಳಾದ ಸಂದೀಪ್ ಮತ್ತು ಸಂತೋಷ್ ಎಂಬುವವರು ಆಶಾ ಕಾರ್ಯಕರ್ತೆಗೆ ಕೊಲೆ ಬೆದರಿಕೆ ಹಾಕಿದ್ದಾರೆ. 'ಟೆಸ್ಟ್ ಮಾಡಿಸಿ ನನ್ನ ಅತ್ತೆಗೆ ಪಾಸಿಟಿವ್ ಬರಿಸಿದ್ದು ನೀನು. ಕರೊನಾ ಪಾಸಿಟಿವ್ ಬರಿಸಿದ್ರೆ ನಿನಗೆ ಹಣ ಬರುತ್ತೆ' ಎಂದು ನಿಂದಿಸಿದ್ದಲ್ಲದೆ ಹಲ್ಲೆಗೆ ಯತ್ನಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದಡಿ ಅವರಿಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿರಿ ಅಪ್ಪ ಸತ್ತ 4 ದಿನಕ್ಕೆ ಅಮ್ಮನೂ ಕೋವಿಡ್ಗೆ ಬಲಿ! ಅಂತ್ಯಸಂಸ್ಕಾರಕ್ಕೆ ಹಣ ಇಲ್ಲದೆ ಪುಟ್ಟ ಮಗಳೇ ಗುಂಡಿ ಅಗೆದು ಕಾರ್ಯ ಮುಗಿಸಿದ್ಲು