

ಬಳ್ಳಾರಿ: ಹೊರರಾಜ್ಯಗಳಿಂದ ಬಳ್ಳಾರಿಗೆ ಬಂದ ವಿದ್ಯಾರ್ಥಿಗಳಿಗೆ ಉಳಿದುಕೊಳ್ಳಲು ರೂಂ ಕೊಟ್ಟ ಹಿನ್ನೆಲೆ ಒಟ್ಟು 24 ಲಾಡ್ಜ್ ಮಾಲೀಕರ ವಿರುದ್ಧ ತಹಸೀಲ್ದಾರ್ ದೂರು ದಾಖಲಿಸಿದ್ದಾರೆ.
ಹೊರರಾಜ್ಯದ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ನರ್ಸಿಂಗ್ ಪರೀಕ್ಷೆ ಬರೆಯಲು ಬಳ್ಳಾರಿಗೆ ಬಂದಿದ್ದರು. ಅವರೆಲ್ಲರೂ ಬಳ್ಳಾರಿಯ ವಿವಿಧ ಲಾಡ್ಜ್ಗಳಲ್ಲಿ ರೂಂ ಪಡೆದು ಉಳಿದುಕೊಂಡಿದ್ದರು. ಕರೊನಾ ನೆಗೆಟಿವ್ ವರದಿ ಇಲ್ಲದಿದ್ದರೂ ರೂಂ ಕೊಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಅಷ್ಟೇ ಅಲ್ಲ, 68 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ. ಹೊರ ರಾಜ್ಯದವರನ್ನು ನಿಷೇಧಿಸುವ ಜತೆಗೆ ಬಳ್ಳಾರಿಗೆ ಬಂದವರ ಬಗ್ಗೆ ಮಾಹಿತಿ ಕೊಡಬೇಕೆಂದು ನಿಯಮವಿದೆ. ಈ ನಿಯಮ ಪಾಲಿಸದೆ ಉಲ್ಲಂಘಿಸಿದ ಹಿನ್ನೆಲೆ ಗಾಂಧಿನಗರ, ಬ್ರೂಸ್ ಪೇಟೆ, ಬಳ್ಳಾರಿ ರೂರಲ್ ಹಾಗೂ ಕೌಲ್ ಬಜಾರ್ ಠಾಣೆಗಳಲ್ಲಿ 24 ಲಾಡ್ಜ್ಗಳ ವಿರುದ್ಧ ತಹಸೀಲ್ದಾರ್ ರೆಹಮಾನ್ ಪಾಷಾ ಅವರು ಎಫ್ಐಆರ್ ದಾಖಲಿಸಿದ್ದಾರೆ.