ಬೆಂಗಳೂರಲ್ಲಿ ಒಂದೇ ಠಾಣೆಯ 14 ಪೊಲೀಸರಿಗೆ ಕರೊನಾ ಸೋಂಕು

New Project (1)
Published on

ಬೆಂಗಳೂರು: ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚತ್ತಲೇ ಇದ್ದು, ಪೊಲೀಸರನ್ನೂ ಬೆಂಬಿಡದೆ ಕಾಡುತ್ತಿದೆ. ಶಾಲೆಗಳಲ್ಲಿ ಕರೊನಾ ಸ್ಫೋಟಗೊಂಡ ಆತಂಕದ ನಡುವೆಯೇ ಪೊಲೀಸ್​ ಠಾಣೆಯಲ್ಲೂ ಕರೊನಾ ವ್ಯಾಪಿಸಿದ್ದು, ಮತ್ತಷ್ಟು ಆತಂಕ ಸೃಷ್ಟಿಸಿದೆ. ಪೊಲೀಸ್​ ಠಾಣೆಯಯೊಂದರಲ್ಲೇ 14 ಸಿಬ್ಬಂದಿಗೆ ಕರೊನಾ ಸೋಂಕು ತಗುಲಿದೆ!

ಬೆಂಗಳೂರಿನಲ್ಲಿ ಕರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯ ಎಲ್ಲ ಸಿಬ್ಬಂದಿಗೂ ಕರೊನಾ ಟೆಸ್ಟ್(RAT)​ ಮಾಡಲಾಗಿತ್ತು. ಈ ಪೈಕಿ 14 ಮಂದಿಗೆ ಕರೊನಾ ಸೋಂಕು ಇರುವುದು ಗೊತ್ತಾಗಿದೆ. ಪಿಎಸ್​ಐ, ಮೂವರು ಎಎಸ್​ಐ, ಹಾಗೂ 10 ಮಂದಿ ಸಿಬ್ಬಂದಿಗೆ ಕರೊನಾ ಪಾಸಿಟಿವ್​ ಬಂದಿದೆ.

ಪೊಲೀಸ್​ ಠಾಣೆಯನ್ನು ಸ್ಯಾನಿಟೈಸ್​ ಮಾಡಲಾಗಿದ್ದು, ಸೋಂಕಿತರನ್ನು ಹೋಂ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net