ಬೆಂಗಳೂರು: ಇಂದಿನಿಂದ ರಾಜ್ಯದ ಮುಕ್ಕಾಲು ಭಾಗದಲ್ಲಿ ಅನ್ಲಾಕ್ ಪ್ರಕ್ರಿಯೆ ಆರಂಭವಾಗಿದ್ದು, ಬೆಳ್ಳಂಬೆಳಗ್ಗೆಯೇ ಬೆಂಗಳೂರಿಗೆ ಲಕ್ಷಾಂತರ ಜನ ಎಂಟ್ರಿಕೊಟ್ಟಿದ್ದು, ಟ್ರಾಫಿಕ್ ಜಾಮ್ನಿಂದ ವಾಹನಗಳು ಕಿಲೋ ಮೀಟರ್ಗಟ್ಟಲೆ ನಿಂತಿದ್ದ ದೃಶ್ಯ ಕಂಡುಬಂತು.ಅನ್ಲಾಕ್ ಸುಳಿವು ಸಿಕ್ಕಿದ್ದ ಬೆನ್ನಲ್ಲೇ ಐದಾರು ದಿನದಿಂದ ಸಾವಿರಾರು ಮಂದಿ ಬೆಂಗಳೂರಿನತ್ತ ಮುಖ ಮಾಡಿದ್ದರು. ಕೈಗಾರಿಕೆಗಳು, ಕಾರ್ಖಾನೆಗಳು, ನಿರ್ಮಾಣ ಚಟುವಟಿಕೆಗಳು ಮತ್ತೆ ಶುರುವಾಗಲಿವೆ ಎಂದು ಅರಿತ ಲಕ್ಷಾಂತರ ಮಂದಿ ಬೆಂಗಳೂರು ಮಹಾನಗರದತ್ತ ದೌಡಾಯಿಸುತ್ತಿದ್ದಾರೆ. ಇಂದು(ಸೋಮವಾರ) ನೆಲಮಂಗಲ ಟೋಲ್ ಸೇರಿದಂತೆ ಬೆಂಗಳೂರಲ್ಲಿ ಕಂಡು ಬಂದ ದೃಶ್ಯ ವಿಜಯವಾಣಿ ಫ್ರೋಟೋಗ್ರಾಫರ್ ರಾಘವೇಂದ್ರ ಸಿ. ಅವರ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ.