ಕರೊನಾ ಭಯಕ್ಕೆ ನದಿಗೆ ಹಾರಿ ಪ್ರಾಣಬಿಟ್ಟ ಶಿಕ್ಷಕ! ಸಾವಿಗೂ ಮುನ್ನ ಪತ್ನಿಯ ಮನೆ ಮುಂದೆ ಇಟ್ಟಿದ್ದೇನು?

suicide
Published on

ಮೈಸೂರು: ಕರೊನಾ ಪಾಸಿಟಿವ್​ ಬಂದಿದ್ದಕ್ಕೆ ಮನನೊಂದ ಶಿಕ್ಷಕರೊಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೈಸೂರು ಜಿಲ್ಲೆ ಕೆ.ಆರ್.ನಗರದ ಕೋಗಿಲೂರು ಗ್ರಾಮದ ಲೋಕೇಶ್ ಮೃತ ದುರ್ದೈವಿ. ಲೋಕೇಶ್​ಗೆ ಕಳೆದ ವರ್ಷ ಮದುವೆ ಆಗಿತ್ತು. ಇವರಿಗೆ ಇತ್ತೀಚಿಗೆ ಕರೊನಾ ಸೋಂಕು ದೃಢಪಟ್ಟಿತ್ತು. ಕುಟುಂಬಸ್ಥರು‌ ಆತ್ಮಸ್ಥೈರ್ಯ ತುಂಬಿದ್ದರು. ವಾರ್ ರೂಂನಿಂದ ಕರೆ‌ ಮಾಡಿ ಆತಂಕ ಪಡಬೇಡಿ ಎಂದು ತಿಳಿಸಿದ್ದರು.

ಆದರೂ ಲೋಕೇಶ್​ರಲ್ಲಿ ಭಯ ಕಡಿಮೆ ಆಗಿರಲಿಲ್ಲ ಎನ್ನಲಾಗಿದೆ. ಪತ್ನಿ‌ ಮನೆಗೆ ಹೋಗುವುದಾಗಿ ತನ್ನ ಮನೆಯಲ್ಲಿ ಹೇಳಿದ್ದ ಲೋಕೇಶ್, ಪತ್ನಿ ಮನೆ ಬಳಿ ಬೈಕ್ ನಿಲ್ಲಿಸಿ ಅಲ್ಲಿಯೇ ಮೊಬೈಲ್ ಇಟ್ಟು ನಾಪತ್ತೆಯಾಗಿದ್ದರು. ಎರಡು ದಿನದ ಬಳಿಕ ಹಾಸನ ಜಿಲ್ಲೆಯ ಅರಕಲಗೂಡಿನ ಕೇರಳಪುರದ ಕಾವೇರಿ ನದಿಯಲ್ಲಿ ಇವರ ಶವ ಪತ್ತೆಯಾಗಿದೆ. ಕೊಣನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ‌ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net