

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡ ತುಮಕೂರು ಜಿಲ್ಲೆಯಲ್ಲಿ ಮಾಹಾಮಾರಿ ಕರೊನಾ ಸ್ಫೋಟಗೊಂಡಿದೆ. ಯುವಕ-ಯುವತಿಯರು-ಮಧ್ಯವಯಸ್ಕರೇ ಹೆಚ್ಚಿನ ಸಂಖ್ಯೆಯಲ್ಲಿ ಕರೊನಾಗೆ ಬಲಿಯಾಗುತ್ತಿದ್ದು, ಈ ಸಾವಿನ ಸರಣಿಗೆ ಸರ್ಕಾರಿ ಶಾಲೆ ಶಿಕ್ಷಕರೂ ಸೇರುತ್ತಿರುವುದು ದುರಂತ.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನಲ್ಲಿ ಸರ್ಕಾರಿ ಶಾಲೆಗಳ ಮೂವರು ಶಿಕ್ಷಕರು ಕರೊನಾದಿಂದ ಮೃತಪಟ್ಟಿದ್ದಾರೆ. ಒಂದೇ ದಿನ ಮೂವರು ಶಿಕ್ಷಕರು ಕೋವಿಡ್ಗೆ ಬಲಿಯಾಗಿದ್ದಾರೆ. ಉಜ್ಜನಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಶಿವರಾಮೇಗೌಡ, ಮಲ್ಲಿಪಾಳ್ಯದ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಪರಮೇಶ್ವರ ಆಚಾರ್ ಮತ್ತು ತುರುಗುನೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ಕೃಷ್ಣಪ್ಪ ಮೃತರು. ಮೂವರು ಶಿಕ್ಷಕರಿಗೂ ಕಳೆದ ವಾರ ಕರೊನಾ ಪಾಸಿಟಿವ್ ದೃಢಪಟ್ಟಿತ್ತು.