

ಬೆಂಗಳೂರು: ದೀಪಾಂಜಲಿ ನಗರದ ಕಿಮ್ಕೊ ಜಂಕ್ಷನ್ ಬಳಿ ಶಿಥಿಲಾವಸ್ಥೆಯ ಕಾಂಪೌಂಡ್ ಗೋಡೆ ಕುಸಿದು ಇಬ್ಬರು ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ.
ಬಾಲಾ ಮತ್ತು ರಾಜಮಣಿ ಮೃತ ದುರ್ದೈವಿಗಳು. ಅಗ್ರೋ ಮೋರ್ ಲಿಮಿಟೆಡ್ ಕಂಪನಿಗೆ ಸೇರಿದ ಹಳೆಯ ಕಾಂಪೌಂಡ್ ಸೋಮವಾರ ಮಧ್ಯಾಹ್ನ ಕುಸಿದ್ದು, ಈ ಭಾಗದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಗೋಡೆ ಕೆಳಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬ್ಯಾಟರಾಯನಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.