ದಿನೇಶ್ ಕಲ್ಲಹಳ್ಳಿ, ರಾಜಶೇಖರ್ ಮುಲಾಲಿ ವಿರುದ್ಧ ಪೊಲೀಸರಿಗೆ ದೂರು

dinesh 2
dinesh kallahalli
Published on

ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಮತ್ತು ಹೋರಾಟಗಾರ ರಾಜಶೇಖರ್ ಮುಲಾಲಿ ವಿರುದ್ದ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಂಡ್ಯದ ಮಾನವ ಹಕ್ಕುಗಳ ಸೇವಾ ಸಮಿತಿ ಅಧ್ಯಕ್ಷೆ ಇಂದಿರಾ ಎನ್ನುವರು ಇಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಇಬ್ಬರೂ ಸೇರಿಕೊಂಡು ನೊಂದ ಮಹಿಳೆಯರ ವಿರುದ್ದ ಮಾನಹಾನಿಕಾರಕ ರೀತಿಯಲ್ಲಿ ಷಢ್ಯಂತ್ರ ಮಾಡಿ, ಅವರನ್ನು ಸಮಾಜದ ಮುಂದೆ ಬೆತ್ತಲೆಗೊಳಿಸುತ್ತಿದ್ದಾರೆ. ಹೀಗಾಗಿ ಇವರ ವಿರುದ್ಧ ಪೊಲೀಸರು ಬೆದರಿಕೆ ಪ್ರಕರಣದಡಿ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಲಾಗಿದೆ.

ರಮೇಶ್ ಜಾರಕಿಹೊಳಿ ಕೇಸ್​ನಲ್ಲಿ ಯುವತಿಗೆ ಬೆದರಿಕೆ ಇದ್ರೆ, ದಿನೇಶ್ ಕಲ್ಲಹಳ್ಳಿ ಆ ಯುವತಿಯನ್ನು ಕರೆದುಕೊಂಡು ಬಂದು ದೂರು ನೀಡಬಹುದಿತ್ತು. ಇದುವರೆಗೆ ಯುವತಿಯನ್ನು ಯಾಕೆ ಕರೆತಂದಿಲ್ಲ ... ಇವ್ರು ಯಾಕೆ ಬರ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಈ ಇಬ್ಬರೂ ಸಾಮಾಜಿಕ ಹೋರಾಟಗಾರರು ಎಂದು ಹೇಳಿಕೊಂಡು ಹೆಣ್ಣು ಮಕ್ಕಳಿಗೆ ದಕ್ಕೆ ತರುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜಶೇಖರ್ ಮುಲಾಲಿ ಇನ್ನು ಕೆಲ ಸಿಡಿಗಳಿದ್ದಾವೆ ಎಂದಿದ್ದಾರೆ. ಅವರ ವಿರುದ್ದ ಶಿಸ್ತುಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದೇವೆ ಎಂದು ದೂರಿನಲ್ಲಿ ಇಂದಿರಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net