ಜಾರಕಿಹೊಳಿ ಸಿಡಿ ಬಹಿರಂಗ: ಸಚಿವ ಸಿ.ಪಿ ಯೋಗೇಶ್ವರ್ ಹೊಸ ಬಾಂಬ್!

CP Yogishwar
CP Yogishwar
Published on

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್ ವಿಡಿಯೋ ಪ್ರಕರಣದ ಹಿಂದೆ ಕನಕಪುರ ಮತ್ತು ಬೆಳಗಾವಿ ಕಡೆಯವ್ರು ಇದ್ದಾರೆ ಎಂದು ಅರಣ್ಯ ಸಚಿವ ಸಿ.ಪಿ.ಯೋಗೀಶ್ವರ ಅವರು ಹೇಳಿದ್ದಾರೆ.

ಬೆಂಗಳೂರಿನ ಅರಣ್ಯ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನಕಪುರ, ಬೆಳಗಾವಿಯವ್ರೇ ರಮೇಶ್ ಜಾರಕಿಹೊಳಿ ಅಶ್ಲೀಲ ವಿಡಿಯೋ ಬರಲು ಕಾರಣ. ರಮೇಶ್ ಜಾರಕಿಹೊಳಿ ವಿಚಾರದಲ್ಲಿ ಕನಕಪುರ ಮತ್ತು ಬೆಳಗಾವಿಯವರ ರಾಜಕೀಯ ಷಢ್ಯಂತ್ರ ಇದೆ. ಮುಂದಿನ ದಿನಗಳಲ್ಲಿ ಅವರು ಅನುಭವಿಸ್ತಾರೆ ಎಂದು ಆರೋಪ ಮಾಡಿದ್ದಾರೆ.

ರಮೇಶ್ ಜಾರಕಿಹೊಳಿ‌ ಪ್ರಕರಣದಲ್ಲಿ ರಾಜಕೀಯ ಪಿತೂರಿ ನಡೆದಿದೆ. ರಾಜಕೀಯ ಷಂಡ್ಯಂತ್ರದಿಂದ ನಡೆದಿದೆ. ಈ ವಿವಾದದಲ್ಲಿ ನನ್ನನ್ನು ಎಳೆಯಬೇಡಿ ಎಂದು ಸಿಪಿ‌ ಯೊಗೇಶ್ವರ್ ಹೇಳಿದ್ದಾರೆ.

ಆರು‌ ಜನ ಸಚಿವರು ಕೋರ್ಟ್ ಗೆ ಹೋಗಿದ್ಯಾಕೆ ಅಂತ ಗೊತ್ತಿಲ್ಲ. ಆ ಸಚಿವರನ್ನೇ ನೀವು ಕೇಳಬೇಕು. ಈ ವಿಚಾರ ನಂಗೇನು ಕೇಳ್ತೀರಾ? ಅವರ ವೈಯಕ್ತಿಕ ರಕ್ಷಣೆಗೆ ಕೋರ್ಟ್ ಗೆ ಮೊರೆ ಹೊಗಿದ್ದಾರೆ, ಯಾರು ಕೋರ್ಟ್ ಮೊರೆ ಹೋಗಿದ್ದಾರೋ ಅವರನ್ನೇ ಕೇಳಿ ಎಂದು ಮಾಧ್ಯಮದವರ ಮೇಲೆ ಹರಿಹಾಯ್ದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net