ಸದೃಢ ಸಮಾಜ ನಿರ್ಮಾಣ ಸಂಕಲ್ಪ: ಡಾ.ರವೀಶ್ ಪಡುಮಲೆ

Ism_Aati-du-onji-dina
Published on

ಪುತ್ತೂರು ಗ್ರಾಮಾಂತರ: ಜಾತೀಯತೆ, ಮೇಲ್ವರ್ಗ, ಕೆಳವರ್ಗ ಎನ್ನುವ ಬೇಧ ಭಾವ ಬದಿಗಿಟ್ಟು ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬದುಕಿ ಬಾಳಿ, ಸದೃಢ ಸಮಾಜ ಕಟ್ಟುವಲ್ಲಿ ಜತೆಯಾಗಬೇಕಿದೆ ಎಂದು ಉಪನ್ಯಾಸಕ, ದೈವನರ್ತಕ ಡಾ.ರವೀಶ್ ಪಡುಮಲೆ ಹೇಳಿದರು.

ಸುಳ್ಯಪದವಿನ ಸರ್ವೋದಯ ವಿದ್ಯಾಸಂಸ್ಥೆಯಲ್ಲಿ ‘ಆಟಿಡೊಂಜಿ ದಿನ’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಹಳೇ ವಿದ್ಯಾರ್ಥಿ ಮಾಧವ ನಾಯಕ್ ಸುಳ್ಯಪದವು ಕಾರ್ಯಕ್ರಮ ಉದ್ಘಾಟಿಸಿದರು. ಸರ್ವೋದಯ ವಿದ್ಯಾಸಂಸ್ಥೆ ಸಂಚಾಲಕ ಮಹದೇವ ಭಟ್ ಕೊಲ್ಯ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಪ್ರಕಾಶ್ ಮರದಮೂಲೆ, ಹವ್ಯಾಸಿ ಯಕ್ಷಗಾನ ಕಲಾವಿದ ಚನಿಯಪ್ಪ ನಾಯ್ಕ ಉಪಸ್ಥಿತರಿದ್ದರು.

ಡಾ.ರವೀಶ್ ಪಡುಮಲೆ ಅವರನ್ನು ವಿದ್ಯಾಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಸರ್ವೋದಯ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸುಖೇಶ್ ರೈ ಸ್ವಾಗತಿಸಿದರು. ಕಚೇರಿ ಸಹಾಯಕ ರಾಜೇಶ್ ವಂದಿಸಿದರು. ಶಿಕ್ಷಕಿ ಪ್ರಶಾಂತಿ ಕೆ. ಕಾರ್ಯಕ್ರಮ ನಿರೂಪಿಸಿದರು.

ಆಟಿ ತಿಂಗಳಲ್ಲಿ ತುಳುನಾಡಿನಲ್ಲಿ ಉಪಯೋಗಿಸುವ ವಿಶೇಷ ತಿಂಡಿ ತಿನಿಸುಗಳ ಪ್ರದರ್ಶನ ಮತ್ತು ಸಹಭೋಜನ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net