

ಮೂಲ್ಕಿ: ಕರಮ್ ಹಬ್ಬವು ಬಣ್ಣ ಬೆರಗಿನ ಮತ್ತು ಸಾಂಪ್ರಾದಾಯಿಕ ನೆಲೆಗಟ್ಟು ಹೊಂದಿದ ತ್ಸವವಾಗಿತ್ತು ಎಂದು ಡಿವೈನ್ ಕಾಲ್ ರಿಟ್ರೀಟ್ ಸೆಂಟರ್‌ನ ನಿರ್ದೇಶಕ ಫಾ.ಅಬ್ರಹಾಂ ಡಿಸೋಜ ಹೇಳಿದರು.
ಮಂಗಳೂರು ಮತ್ತು ಸುತ್ತಮುತ್ತಲಿನ 300 ಚೋಟಾ ನಾಗ್ಪುರ್ ವಲಸೆ ಆದಿವಾಸಿಗಳು ಮೂಲ್ಕಿ ಕಾರ್ನಾಡು ಡಿವೈನ್ ಕಾಲ್ ರಿಟ್ರೀಟ್ ಸೆಂಟರ್‌ನಲ್ಲಿ ಭಾನುವಾರ ತಮ್ಮ ಪಾರಂಪರಿಕ ಕರಮ್ ಹಬ್ಬವನ್ನು ನೃತ್ಯ, ಹಾಡು ಮತ್ತು ಆದಿವಾಸಿ ಸಂಪ್ರದಾಯಗಳೊಂದಿಗೆ ಸಂಭ್ರಮಿಸಿದರು.
ಮಂಗಳೂರು ಕೇಂದ್ರೀಕೃತಗೊಳಿಸಿ ವಿವಿಧ ಪ್ರದೇಶಗಳಲ್ಲಿ ಚೋಟಾ ನಾಗ್ಪುರ್ ಆದಿವಾಸಿ ವಲಸಿಗರು ಕಾರ್ಖಾನೆಗಳು, ಕೈಗಾರಿಕೆಗಳು, ಆಸ್ಪತ್ರೆಗಳು, ಕೃಷಿ ಮತ್ತು ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಚೋಟಾ ನಾಗ್ಪುರ್ ಪ್ರದೇಶದ ಆರ್ಥಿಕ ಕಠಿಣ ಪರಿಸ್ಥಿತಿಯಿಂದ ಜೀವನೋಪಾಯ ಹುಡುಕಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಲಸೆ ಬಂದು ಕುಟುಂಬಗಳೊಂದಿಗೆ ನೆಲಸಿದ್ದಾರೆ. ಅವರ ಮಕ್ಕಳು ವಿದ್ಯಾವಂತರಾಗಿದ್ದಾರೆ ಮತ್ತು ಉತ್ತಮ ಉದ್ಯೋಗದಲ್ಲಿ ನೆಲೆಸಿದ್ದಾರೆ. ಈ ಕಾರ್ಯಕ್ರಮವು ಎಲ್ಲ ವಲಸೆ ಸಮುದಾಯಗಳಿಗೆ ಮಾನ್ಯತೆ, ಗೌರವ ಮತ್ತು ಶ್ರದ್ಧೆಯನ್ನು ನೀಡುತ್ತದೆ.
ಫಾ.ಸುಶೀಲ್ ಮತ್ತಿತರರೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅನೇಕ ಗಣ್ಯರು ಉಪಸ್ಥಿತರಿದ್ದರು.