ನೀತಿ ಸಂಹಿತೆ ಉಲ್ಲಂಘಿಸಿದ ಶಿಕ್ಷಕ: ಬಿಜೆಪಿ ಅಭ್ಯರ್ಥಿಯ ಬ್ಯಾಡ್ಜ್​ ಧರಿಸಿ ಮತದಾರರ ಮೇಲೆ ಪ್ರಭಾವ ಬೀರಲು ಯತ್ನ

election
Published on

ಹುಬ್ಬಳ್ಳಿ: ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಶಿಕ್ಷಕರೊಬ್ಬರು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ದೇಶಪಾಂಡೆ ನಗರ ಎನ್​.ಆರ್. ದೇಸಾಯಿ ರೋಟರಿ ಶಾಲೆಯ ಮತಗಟ್ಟೆ ಆವರಣಕ್ಕೆ ಬಿಜೆಪಿ ಅಭ್ಯರ್ಥಿಯ ಭಾವಚಿತ್ರವುಳ್ಳ ಬ್ಯಾಡ್ಜ್​ ಹಾಕಿಕೊಂಡು ಬಂದು ಶಿಕ್ಷಕ ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದಾರೆ.

ನಗರದ ಸಿದ್ದರಾಮೇಶ್ವರ ಸರ್ಕಾರಿ ಶಾಲೆಯ ಶಿಕ್ಷಕ ಶಶಿಧರ ರಾಜಿ ಎಂಬುವವರಿಂದ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಮತಗಟ್ಟೆಯಲ್ಲಿ ಮತದಾನ ಚಲಾವಣೆಗೆ ಶಿಕ್ಷಕರು ಸಾಲುಗಟ್ಟಿ ನಿಂತಿದ್ದರು. ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರ ಭಾವಚಿತ್ರ ಇರುವ ಬ್ಯಾಡ್ಜ್​ ಧರಿಸಿದ್ದ ಶಿಕ್ಷಕ ಶಶಿಧರ ಅವರು ತನ್ನ ಮತ ಚಲಾಯಿಸದೇ ಸರದಿ ಸಾಲಿನಲ್ಲಿ ನಿಂತಿದ್ದ ಶಿಕ್ಷಕ ಮತದಾರರ ಎದುರು ಅಡ್ಡಾಡುತ್ತಿದ್ದರು. ಮಾಧ್ಯಮ ಪ್ರತಿನಿಧಿಗಳನ್ನು ಕಂಡು ಸ್ಥಳದಿಂದ ತೆರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net