ಸಿಎಂ ಬಸವರಾಜ ಬೊಮ್ಮಾಯಿ ಆಡಳಿತ ಪಂಕ್ಚರ್​ ಆದ ಬಸ್ಸಿನಂತೆ: ಇಬ್ರಾಹಿಂ ಲೇವಡಿ

C M Ibrahim
Published on

ದಾವಣಗೆರೆ: ಸಿಎಂ ಬಸವರಾಜ ಬೊಮ್ಮಾಯಿ ಆಡಳಿತ ಪಂಕ್ಚರ್​ ಆದ ಬಸ್ಸಿನಂತೆ. ಯಾವಾಗ ಏನಾಗುತ್ತದೋ ಗೊತ್ತಿಲ್ಲ. ಎಂದು ಎಂಎಲ್​ಸಿ ಸಿ.ಎಂ. ಇಬ್ರಾಹಿಂ ಲೇವಡಿ ಮಾಡಿದರು.

ದಾವಣಗೆರೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ರಾಹಿಂ, ರಾಜ್ಯದಲ್ಲಿ ಬಿಜೆಪಿ ಕತೆ ಮುಗಿದಿದೆ. ಸುಡಬೇಕೋ ಹೂಳಬೇಕೋ ಎಂಬುದೇ ಸದ್ಯಕ್ಕಿರುವ ಪ್ರಶ್ನೆ. ಸಿಎಂ ಬಸವರಾಜ ಬೊಮ್ಮಾಯಿ ಆಡಳಿತ ಪಂಕ್ಚರ್​ ಆದ ಬಸ್ಸಿನಂತೆ. ಯಾವಾಗ ಏನಾಗುತ್ತದೋ ಗೊತ್ತಿಲ್ಲ. ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರಲಿದೆ ಎಂದರು.

ನಾನು ವಕ್ಫ್​ ಆಸ್ತಿ ಕಬಳಿಸಿದ್ದಾಗಿ ಆರೋಪಿಸಿರುವ ವಿ.ಎಸ್​. ಉಗ್ರಪ್ಪ ಅದನ್ನು ಸಾಬೀತುಪಡಿಸಲಿ. ರಾಜ್ಯ ಸರ್ಕಾರ ಈ ಹಿಂದೆ ಅನ್ವರ್​ ಮಾಣಿಪ್ಪಾಡಿ ನೇತೃತ್ವದಲ್ಲಿ ಸಿದ್ಧಪಡಿಸಿದ ವರದಿಯನ್ನು ಸಿಬಿಐಗೆ ಕೊಡಲಿ ಎಂದ ಇಬ್ರಾಹಿಂ, ಗ್ರಪ್ಪನಿಗೆ ಮದುವೆ ಮಾಡಿದ್ದು, ಎಂಎಲ್ಸಿ ಮಾಡಿದ್ದೇ ನಾನು. ಕಾರು ಸಹ ನೀಡಿದ್ದೆ. ಅವರು ಅದನ್ನು ಮರೆತಿದ್ದಾರೆ. ಅವರು ವಕೀಲರು, ನಾನು ಅವರ ಕದಾರ ಆಗಿದ್ದೆ. ವಕೀಲರು ಕದಾರನ ವಿರುದ್ಧವೇ ವಾದ ಮಾಡುವುದು ಸರಿಯಲ್ಲ ಎಂದು ವ್ಯಂಗ್ಯವಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net