ಪೊಲೀಸರಿಂದಲೇ ಆಟೋ ತಳ್ಳಿಸಿದ ಭೂಪ! ಆಟೋ ಸ್ಟಾರ್ಟ್​ ಮಾಡಲ್ಲ... ಎಂದು ರೋಡಲ್ಲೇ ಚಾಲಕ ಕಿರಿಕ್​

auto 1
Published on

ಚನ್ನಪಟ್ಟಣ: ಮದ್ಯ ಸೇವಿಸಿ ಆಟೋ ಚಲಾಯಿಸುತ್ತಿದ್ದ ಚಾಲಕನೊಬ್ಬ ಪೊಲೀಸರೊಂದಿಗೆ ಗಲಾಟೆ ಮಾಡಿದ್ದು ಮಾತ್ರವಲ್ಲ, ಪೊಲೀಸರಿಂದಲೇ ಆಟೋವನ್ನ ತಳ್ಳಿಸಿದ್ದಾನೆ!

ಇಂತಹ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ನಗರದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ. ಕೆಂಗೇರಿ ಮೂಲದ ಕುಮಾರ್​ ಎಂಬಾತ ಸ್ನೇಹಿತರೊಂದಿಗೆ ಕಬ್ಬಾಳು ದೇವಸ್ಥಾನಕ್ಕೆ ಬಂದಿದ್ದ. ವಾಪಸ್​ ಹೋಗುವಾಗ ಆಟೋ ಅಡ್ಡಗಟ್ಟಿದ ಸಂಚಾರ ಪೊಲೀಸರೊಂದಿಗೆ ಕುಮಾರ್​ ಗಲಾಟೆ ಮಾಡಿದ್ದಾನೆ.

ಠಾಣೆಯಲ್ಲಿ ಪೊಲೀಸರ ಜತೆ ವಾಗ್ವಾದಕ್ಕಿಳಿದ ಆಟೋ ಮಾಲೀಕ
ಠಾಣೆಯಲ್ಲಿ ಪೊಲೀಸರ ಜತೆ ವಾಗ್ವಾದಕ್ಕಿಳಿದ ಆಟೋ ಮಾಲೀಕ

ಆಟೋ ವಶಕ್ಕೆ ತೆಗೆದುಕೊಳ್ಳಲು ಮುಂದಾದ ಪೊಲೀಸರೊಂದಿಗೆ ಕೆಲಹೊತ್ತು ಸಂಘರ್ಷಕ್ಕಿಳಿದಿದ್ದಾನೆ. ಆಟೋ ಸ್ಟಾರ್ಟ್​ ಮಾಡಲ್ಲ ಎಂದು ಪೊಲೀಸರ ಕೈಯಲ್ಲೇ ಠಾಣೆವರೆಗೂ ಆಟೋ ತಳ್ಳಿಸಿದ್ದಾನೆ. ಇನ್ನು ಠಾಣೆಯಲ್ಲಿ ಆಲ್ಕೋಹಾಲ್​ ಮೀಟರ್​ ಪರೀಕ್ಷೆಗೂ ತಕರಾರು ಮಾಡಿದ್ದಾನೆ. ಮದ್ಯಸೇವಿಸಿ ಚಾಲನೆ ಮಾಡಿದ್ದಷ್ಟೇ ಅಲ್ಲದೆ ಪೊಲೀಸರೊಂದಿಗೆ ಕಿರಿಕ್​ ಮಾಡಿಕೊಂಡ ಈತ ಸದ್ಯ ನಗರ ಸಂಚಾರ ಪೊಲೀಸರ ವಶದಲ್ಲಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net