ದೆಹಲಿಗೆ ಅಲ್ಪಾವಧಿ ಟ್ರಿಪ್, ಯಾರನ್ನೂ ಭೇಟಿ ಮಾಡಲ್ಲ: ಸಿಎಂ ಬೊಮ್ಮಾಯಿ‌

Bommai
Published on

ಬೆಂಗಳೂರು: ದೆಹಲಿಯ‌ ಇಂದಿನ ಪ್ರಯಾಣ ಅಲ್ಪಾವಧಿಯದು. ಪಕ್ಷದ ಯಾವುದೇ ವರಿಷ್ಠರನ್ನು ಭೇಟಿಯಾಗುವುದಿಲ್ಲ‌. ಅಂತಹ ಉದ್ದೇಶವೂ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ದೆಹಲಿಗೆ ತೆರಳುವ ಮುನ್ನ ಶುಕ್ರವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ, ಜಿಎಸ್​ಟಿ ಕೌನ್ಸಿಲ್​ನ ಸಚಿವರ ಸಮೂಹದ ಸಭೆ ಹಾಗೂ ಖಾಸಗಿ‌ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಬೆಂಗಳೂರಿಗೆ ಮರಳುವೆ. ಇಂದಿನ ದೆಹಲಿ ಪ್ರವಾಸ ಇವೆರಡೇ ಕಾರ್ಯಕ್ರಮಕ್ಕೆ ಸೀಮಿತವಾಗಿದ್ದು, ಯಾರ ಭೇಟಿಗೂ ಕಾಲಾವಕಾಶ ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಶನಿವಾರ ಬೆಂಗಳೂರಿಗೆ ಬರುತ್ತಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net