More

    ಬಾವಿಗೆ ಬೀಳುತ್ತಿದ್ದ ಸಾರಿಗೆ ಬಸ್ ಜಸ್ಟ್ ಮಿಸ್: 70 ಜನರ ಪ್ರಾಣ ಉಳಿಸಿದ ಬೇವಿನ ಮರ

    ವಿಜಯಪುರ: ಚಾಲಕನ ನಿಯಂತ್ರಣ ತಪ್ಪಿದ ಬಸ್ ಇನ್ನೇನು ಆಳ ಬಾವಿಗೆ ಬೀಳಬೇಕು ಅನ್ನುಷ್ಟರಲ್ಲಿ ಆಪದ್ಬಾಂಧವನಾಗಿ ಬಂದ ಬೇವಿನ ಮರ, 70 ಜನರ ಪ್ರಾಣ ಉಳಿಸಿದೆ.

    ಇಂಡಿಯಿಂದ ವಿಜಯಪುರಕ್ಕೆ ಗುರುವಾರ ಇಂಡಿ ಡಿಪೋದ ಸಾರಿಗೆ ಬಸ್ ಪ್ರಯಾಣಿಕರನ್ನು ಕರೆದೊಯ್ಯುತ್ತಿತ್ತು. ನಾಗಠಾಣ ಮತ್ತು ಅಲಿಯಾಬಾದ್ ನಡುವಿನ ಮಾರ್ಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಬದಿಯ ತಗ್ಗು ಪದೇಶಕ್ಕೆ ನುಗ್ಗಿ ಬೇವಿನ ಮರಕ್ಕೆ ಡಿಕ್ಕಿ ಹೊಡೆದಿದೆ. ಮರದ ಮುಂದೆಯೇ ಆಳ ಬಾವಿ ಇದೆ. ಬೇವಿನ ಮರ ಅಡ್ಡ ಇರದೇ ಹೋಗಿದ್ದರೆ ಬಸ್ ನೇರವಾಗಿ ಬಾವಿಗೆ ಬೀಳುತ್ತಿತ್ತು.

    ಬಾವಿಗೆ ಬೀಳುತ್ತಿದ್ದ ಸಾರಿಗೆ ಬಸ್ ಜಸ್ಟ್ ಮಿಸ್: 70 ಜನರ ಪ್ರಾಣ ಉಳಿಸಿದ ಬೇವಿನ ಮರ

    ಬಸ್​ನಲ್ಲಿದ್ದ ಮೂರ್ನಾಲ್ಕು ಮಂದಿ ಗಾಯಗೊಂಡಿದ್ದು, ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೇವಿನ ಮರ ಇರದೇ ಹೋಗಿದ್ದರೆ ನಮ್ಮ ಕಥೆ ಏನಾಗುತ್ತಿತ್ತೋ… ದೇವರಂತೆ ನಮ್ಮನ್ನು ಕಾಪಾಡಿತು ಬೇವಿನ ಮರ ಎಂದು ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

    ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್​ಗೆ ಐತಿಹಾಸಿಕ ಗೆಲುವು: ಮಧು ಜಿ.ಮಾದೇಗೌಡಗೆ ವಿಜಯ ಮಾಲೆ

    ಗುಬ್ಬಿ ಪಟ್ಟಣದಲ್ಲಿ ದಸಂಸ ಮುಖಂಡನ ಬರ್ಬರ ಹತ್ಯೆ: ಐವರನ್ನ ವಶಕ್ಕೆ ಪಡೆದ ಪೊಲೀಸರು

    ಅಕ್ಕನ ಚಿತೆಗೆ ಹಾರಿ ಪ್ರಾಣಬಿಟ್ಟ ತಮ್ಮ! ನೋವಲ್ಲೇ 430km ದೂರದಿಂದ ಬಂದವ ನೋಡನೋಡುತ್ತಿದ್ದಂತೆ ಸುಟ್ಟು ಕರಕಲಾದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts