More

    ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್​ಗೆ ಐತಿಹಾಸಿಕ ಗೆಲುವು: ಮಧು ಜಿ.ಮಾದೇಗೌಡಗೆ ವಿಜಯ ಮಾಲೆ

    ಮೈಸೂರು‌: ವಿಧಾನ ಪರಿಷತ್​ನ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಮಧು ಜಿ. ಮಾದೇಗೌಡ ಗೆಲುವು ಸಾಧಿಸಿದ್ದಾರೆ. ಆ ಮೂಲಕ ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಕಾಂಗ್ರೆಸ್ ಇತಿಹಾಸ ನಿರ್ಮಾಣ ಮಾಡಿದೆ.

    ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಇದುವರೆಗೆ ಕಾಂಗ್ರೆಸ್ ಗೆಲುವು ಸಾಧಿಸಿರಲಿಲ್ಲ. ಆದರೆ, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡ ಅವರು ಬಿಜೆಪಿ ಅಭ್ಯರ್ಥಿ ಮೈ.ವಿ. ರವಿಶಂಕರ್ ಅವರನ್ನು 12,205 ಮತಗಳ ಅಂತರದಿಂದ ಪರಭಾವಗೊಳಿಸಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

    ಅಖಾಡದಲ್ಲಿ ಒಟ್ಟು 19 ಅಭ್ಯರ್ಥಿಗಳು ಇದ್ದರು. ಆದರೆ ಯಾವುದೇ ಅಭ್ಯರ್ಥಿಗಳು ಗೆಲುವಿಗೆ ನಿಗದಿ ಪಡಿಸಿದ 46,083 ಮತಗಳ ಕೋಟಾ ತಲುಪಲು ಸಾಧ್ಯವಾಗಲಿಲ್ಲ. ಹೀಗಾಗಿ ಅಭ್ಯರ್ಥಿಗಳು ಪಡೆದ ಮತಗಳ ಆಧಾರದ ಮೇಲೆ ಕಡಿಮೆ ಮತ ಪಡೆದ ಅಭ್ಯರ್ಥಿಗಳನ್ನು ಎಲಿಮಿನೇಟ್ ಮಾಡಲಾಯಿತು. ಒಟ್ಟು 17 ಅಭ್ಯರ್ಥಿಗಳನ್ನು ಎಲಿಮಿನೆಟ್ ಮಾಡಿದರೂ ಅತಿಹೆಚ್ಚು ಮತ ಗಳಿಸಿದ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡ ಅವರಿಗೆ ಗೆಲುವಿನ ಕೋಟಾ ತಲುಪಲು 808 ಮತಗಳ ಕೊರತೆ ಎದುರಾಯಿತು. ನಂತರ ರವಿಶಂಕರ್ ಅವರನ್ನು ಎಲಿಮಿನೇಟ್ ಮಾಡಿ ಅಲ್ಲಿಂದ 808 ಮತಗಳನ್ನು ಪಡೆಯಲಾಯಿತು. ಬಿಜೆಪಿ ಅಭ್ಯರ್ಥಿ ಮೈ.ವಿ. ರವಿಶಂಕರ್ 33878 ಮತ ಪಡೆದು ಪರಾಭವಗೊಂಡರು. ಜೆಡಿಎಸ್ ಅಭ್ಯರ್ಥಿ ಎಚ್.ಕೆ.ರಾಮು 19630 ಮತ ಪಡೆದು 3ನೇ ಸ್ಥಾನಕ್ಕೆ ತಲುಪಿದರು.

    24 ತಾಸು ಕಳೆದರೂ ದಕ್ಷಿಣ ಪದವೀಧರ ಕ್ಷೇತ್ರದ ಮತ ಎಣಿಕೆ ಮುಗಿದಿಲ್ಲ… ಮಧ್ಯಾಹ್ನ ಫಲಿತಾಂಶ ಹೊರಬೀಳುವ ಸಾಧ್ಯತೆ

    ಗುಬ್ಬಿ ಪಟ್ಟಣದಲ್ಲಿ ದಸಂಸ ಮುಖಂಡನ ಬರ್ಬರ ಹತ್ಯೆ: ಐವರನ್ನ ವಶಕ್ಕೆ ಪಡೆದ ಪೊಲೀಸರು

    ಅಕ್ಕನ ಚಿತೆಗೆ ಹಾರಿ ಪ್ರಾಣಬಿಟ್ಟ ತಮ್ಮ! ನೋವಲ್ಲೇ 430km ದೂರದಿಂದ ಬಂದವ ನೋಡನೋಡುತ್ತಿದ್ದಂತೆ ಸುಟ್ಟು ಕರಕಲಾದ

    ರಾಜಕೀಯ ಇತಿಹಾಸ ನಿರ್ಮಿಸಿದ ಹೊರಟ್ಟಿ: ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಸತತ 8ನೇ ಬಾರಿಗೆ ಗೆದ್ದು ಬೀಗಿದ ಬಸವರಾಜ ಹೊರಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts