ಸಿದ್ದು ಸರ್ಕಾರದ ಹಗರಣಗಳ ದಾಖಲೆಯನ್ನ ರಾಹುಲ್ ಗಾಂಧಿಗೆ ಕೊಡುವೆ: ಸಿಎಂ ಬೊಮ್ಮಾಯಿ

rahul gandhi siddaramaiah bommai
Published on

ಬೀದರ್: ಸಿದ್ದರಾಮಯ್ಯ ನೃತೃತ್ವದ ಕಾಂಗ್ರೆಸ್​ ಸರ್ಕಾರದಲ್ಲಿ ನಡೆದ ಹಗರಣಗಳ ದಾಖಲೆಯನ್ಮು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸಲ್ಲಿಸುವೆ. ಅದನ್ನು ನೋಡಿ ಅವರು ಯಾರ ಯಾರ ವಿರುದ್ಧ ಕ್ರಮಕೈಗೊಳ್ಳುತ್ತಾರೆ ನೋಡುವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಔರಾದ್​ನಲ್ಲಿ ಆಯೋಜಿಸಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಸಿಎಂ, ಬಿಜೆಪಿ ಸರ್ಕಾರದಲ್ಲಿ ದುಡ್ಡು ಕೊಟ್ಟರೆ ಸರ್ಕಾರಿ ನೌಕರಿ ಸಿಗುತ್ತದೆ ಎಂದು ಬಳ್ಳಾರಿಯಲ್ಲಿ ರಾಹುಲ್ ಮಾಡಿದ ಆರೋಪಕ್ಕೆ ತಿರುಗೇಟು ನೀಡಿದರು. ರಾಹುಲ್ ಗಾಂಧಿ ಅವರಿಗೆ ಆತ್ಮಸಾಕ್ಷಿ ಇದೆಯಾ? ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಶಿಕ್ಷಕರ,‌ ಪೊಲೀಸ್, ಸರ್ಕಾರಿ ಅಭಿಯೋಜಕ ನೇಮಕ ಸೇರಿ ವಿವಿಧ ಹಗರಣ ನಡೆದಿವೆ. ಇದರ ಕುರಿತು ಸಮಗ್ರವಾದ ದಾಖಲೆಗಳನ್ನು ರಾಹುಲ್ ಅವರಿಗೆ ಸಲ್ಲಿಸುವೆ ಎಂದರು.

ನನ್ನ ಆಡಳಿತದಲ್ಲಿ ಪಿಎಸ್​ಐ ನೇಮಕಾತಿ ಹಗರಣ ಹೊರಬರುತ್ತಿದ್ದಂತೆ ಕ್ರಮಕೈಗೊಂಡಿರುವೆ. ಬಿಜೆಪಿ, ಕಾಂಗ್ರೆಸ್ ಎನ್ನದೆ ಎಲ್ಲರನ್ನೂ ಬಂಧಿಸಲಾಯಿತು. ಇದರಲ್ಲಿ ಭಾಗಿಯಾದ ಉನ್ನತ ಅಧಿಕಾರಿಗಳನ್ನೂ ನಾವು ಬಿಟ್ಟಿಲ್ಲ. ಆದರೆ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಅರ್ಜಿ ಸಲ್ಲಿಸದವರಿಗೂ ಸರ್ಕಾರಿ ನೌಕರಿ ನೀಡಲಾಗಿದೆ ಎಂದು ಸಿಎಂ ಟೀಕಿಸಿದರು.

ಕೇಂದ್ರ ಸಚಿವ ಭಗವಂತ ಖೂಬಾ, ಸಚಿವರಾದ ಗೋವಿಂದ ಕಾರಜೋಳ, ಬಿ.ಶ್ರೀರಾಮಲು, ಭೈರತಿ ಬಸವರಾಜ, ಪ್ರಭು ಚವ್ಹಾಣ್, ಶಂಕರ ಪಾಟೀಲ್ ಮುನೇನಕೊಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net