ಪಾವಗಡದ ಸೋಲಾರ್ ಪಾರ್ಕ್ ಮುಳುಗಡೆ: ಏಷ್ಯಾದ ಅತಿ ದೊಡ್ಡ ಸೌರ ಘಟಕದಲ್ಲಿ ಯುವಕನೊಬ್ಬ ಈಜಾಡುತ್ತಿರುವ ದೃಶ್ಯ ವೈರಲ್​

pavagada solar park rain
Published on

ತುಮಕೂರು: ಜಿಲ್ಲೆಯಲ್ಲಿ ನಾಲ್ಕೈದು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಪಾವಗಡದ ಸೋಲಾರ್ ಪಾರ್ಕ್ ಮುಳುಗಡೆಯಾಗಿದೆ.

ಏಷ್ಯಾದ ಅತಿ ದೊಡ್ಡ ಸೌರ ಘಟಕ ಎಂಬ ಹೆಗ್ಗಳಿಕೆ ಹೊಂದಿರುವ ಪಾವಗಡ ತಾಲೂಕಿ ತಿರುಮಣಿ ಗ್ರಾಮದಲ್ಲಿರುವ ಸೋಲಾರ್ ಪಾರ್ಕ್​ ಸಂಪೂರ್ಣ ಜಲಾವೃತಗೊಂಡು ಕೆರೆಯಂತಾಗಿದೆ. ಸೋಲಾರ್ ಪಾರ್ಕ್​ನಲ್ಲಿ ಯುವಕನೊಬ್ಬ ಈಜಾಡುತ್ತಿರುವ ದೃಶ್ಯ ವೈರಲ್​ ಆಗಿದೆ.

ಸುಮಾರು ಸೋಲಾರ್​ ಪಾರ್ಕ್​ 12,500 ಎಕರೆ ವಿಸ್ತೀರ್ಣದಲ್ಲಿದೆ. ಎರಡು ಸಾವಿರ ಮೆಗಾ ವ್ಯಾಟ್ ಸಾಮರ್ಥ್ಯ ಹೊಂದಿದೆ. ವಳ್ಳೂರು ಮತ್ತು ಕ್ಯಾತಗಾನಕೆರೆ ಗ್ರಾಮಗಳ ಮಧ್ಯೆ ಈ ಘಟಕ ಮುಳುಗಡೆಯಾಗಿದೆ. ಮುಳುಗಡೆಯಾಗಿರುವ ಸೋಲಾರ್ ಪ್ಯಾನೆಲ್​ಗಳ ಸುತ್ತಲೂ ವಿದ್ಯುತ್ ಪ್ರವಹಿಸುತ್ತಿದೆ. ಇದರ ಪರಿವೆ ಇಲ್ಲದೆ ಯುವಕನೊಬ್ಬ ಈಜಾಡಿದ್ದಾನೆ. ಆದರೂ ಸಿಬ್ಬಂದಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಟೀಕೆ ವ್ಯಕ್ತವಾಗಿದೆ. ಈಜಾಡುವಾಗ ಅವಘಡವಾಗಿದ್ರೆ ಯಾರು ಹೊಣೆ ಅನ್ನೋದು ಸಾರ್ವಜನಿಕರ ಪ್ರಶ್ನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net