

ಮೈಸೂರು: ಸ್ಥಳೀಯರು ಮತ್ತು ಪರಿಸರವಾದಿಗಳ ವಿರೋಧಕ್ಕೆ ಮಣಿದ ರಾಜ್ಯ ಸರ್ಕಾರ, ಚಾಮುಂಡಿ ಬೆಟ್ಟಕ್ಕೆ ರೋಪ್‌ವೇ ನಿರ್ಮಿಸುವ ಯೋಜನೆಯನ್ನು ಕೈಬಿಟ್ಟಿದೆ.
ಬುಧವಾರ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್. ಭಕ್ತರ ಮತ್ತು ಸ್ಥಳೀಯರ ಭಾವನೆಗಳನ್ನು ಪರಿಗಣಿಸಿ ಚಾಮುಂಡಿ ಬೆಟ್ಟಕ್ಕೆ ರೋಪ್‌ವೇ ಯೋಜನೆಯನ್ನ ಹಿಂಪಡೆಯಲಾಗಿದೆ. ಚಾಮುಂಡಿ ಬೆಟ್ಟಕ್ಕೆ ಪ್ರವಾಸಿಗರಿಗಿಂತ ಭಕ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಮೆಟ್ಟಿಲುಗಳ ಜತೆಗೆ ಹಲವಾರು ಕಡೆಯಿಂದ ಬೆಟ್ಟಕ್ಕೆ ದಾರಿ ಇದೆ. ಬಸ್ ಸೌಲಭ್ಯವೂ ಇದೆ. ಹಾಗಾಗಿ ರೋಪ್ ವೇ ಯೋಜನೆಯನ್ನು ಕೈ ಬಿಡಲಾಗಿದೆ ಎಂದು ವಿವರಿಸಿದರು.