ಮೈಸೂರು ಗ್ಯಾಂಗ್​ ರೇಪ್​: ಆ ತಡರಾತ್ರಿ ಪೊಲೀಸರನ್ನೇ ಚಾಕುವಿನಿಂದ ಇರಿಯಲು ಮನ್ನುಗ್ಗಿದ್ದ ಆರೋಪಿ

Gangrape
Published on

ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸಲೆಂದು ಹೋದ ಪೊಲೀಸರನ್ನೇ ಚಾಕುವಿನಿಂದ ಇರಿಯಲು ಆರೋಪಿಯೊಬ್ಬ ಮುಂದಾಗಿದ್ದ ಎಂಬ ಆಘಾತಕಾರಿ ಅಂಶ ಬಯಲಾಗಿದೆ.

ಅತ್ಯಾಚಾರ ಆರೋಪಿಗಳು ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಆ.28ರ ತಡರಾತ್ರಿ ತಮಿಳುನಾಡಿನ ತಿರ್​ಪೂರ್​ ಜಿಲ್ಲೆಯ ಕೇವೂರು ಗ್ರಾಮದಲ್ಲಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಒಬ್ಬ ಆರೋಪಿ ತನ್ನ ಮನೆಯಲ್ಲಿ ಇರದೆ ಬೇರೊಂದು ಮನೆಯಲ್ಲಿ ಚಾಕು ಹಿಡಿದುಕೊಂಡು ಮಲಗಿದ್ದ. ಹಲವು ಬಾರಿ ಪೊಲೀಸರು ಬಾಗಿಲು ಬಡಿದರೂ ಆತ ತೆಗೆದಿರಿಲ್ಲ. ಕೈಯಲ್ಲಿ ಚಾಕು ಹಿಡಿದುಕೊಂಡೇ ಕೆಲ ಸಮಯದ ಬಳಿಕ ಬಾಗಿಲು ತೆಗೆದವ, ಏಕಾಏಕಿ ಪೊಲೀಸರಿಗೆ ಇರಿಯಲು ಯತ್ನಿಸಿದ್ದ. ಅದೃಷ್ಟವಶಾತ್​ ಪೊಲೀಸರು ಅಪಾಯದಿಂದ ತಪ್ಪಿಸಿಕೊಂಡಿದ್ದರು. ಅಪ್ಪಿತಪ್ಪಿ, ಆ ಚಾಕು ಚುಚ್ಚಿದ್ದರೆ ಪ್ರಾಣಾಪಾಯ ಸಂಭವಿಸುತ್ತಿತ್ತು ಎಂದು ಪೊಲೀಸ್​ ಅಧಿಕಾರಿಯೊಬ್ಬರು ಅಂದಿನ ಘಟನೆ ಬಗ್ಗೆ ವಿವರಿಸಿದ್ದಾರೆ.

28ರ ರಾತ್ರಿ ಐವರನ್ನು ಬಂಧಿಸಿದ್ದು, ಇದಾದ ಎರಡು ದಿನಕ್ಕೆ ಮೊತ್ತಬ್ಬ ಆರೋಪಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ವಿಚಾರಣೆ ವೇಳೆ ಈಗಾಗಲೇ ಹಲವು ಆಘಾತಕಾರಿ ಅಂಶಗಳು ಬಯಲಾಗಿವೆ. ಆರೋಪಿಗಳು ಎರಡ್ಮೂರು ವರ್ಷದಿಂದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಯುವ ಜೋಡಿಗಳನ್ನು ಪೀಡಿಸಿದ್ದು ಮಾತ್ರವಲ್ಲ, ಅವರ ಬಳಿ ಸಿಕ್ಕಿದ್ದನ್ನೆಲ್ಲ ದೋಚುತ್ತಿದ್ದರು, ಬಂಧಿತರ ಪೈಕಿ ಒಬ್ಬ ಭಗ್ನ ಪ್ರೇಮಿಯಾಗಿದ್ದು, ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಚಟವಿತ್ತು. ವಯಸ್ಸಿನ ವ್ಯತ್ಯಾಸವನ್ನೇ ನೋಡದೆ ಮಹಿಳೆಯರು-ಯುವತಿಯರ ಮೇಲೆ ಲೈಂಗಿಕ ಇವರೆಲ್ಲರೂ ದೌರ್ಜನ್ಯ ಎಸಗಿದ್ದಾರೆ ಎಂಬುದು ಗೊತ್ತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net