ಮೈಸೂರಲ್ಲಿ ಭೀಕರ ಅಪಘಾತ: ಅಣ್ಣ-ತಮ್ಮ ಇಬ್ಬರೂ ಸಾವು

New Project (21)
Published on

ಮೈಸೂರು: ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತವಾಗಿ ಸಹೋದರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಇಲವಾಲ ಸಮೀಪದ ಹೊಸರಾಮನಹಳ್ಳಿ ಸೇತುವೆ ಬಳಿ ಸಂಭವಿಸಿದೆ.

ಹೊಸಕೋಟೆ ಗ್ರಾಮದ ವಿಶ್ವ(21) ಮತ್ತು ಇವರ ತಮ್ಮ ವಿಷ್ಣು(19) ಮೃತ ದುರ್ದೈವಿಗಳು. ಇವರಿಬ್ಬರು ಭಾನುವಾರ ತಡರಾತ್ರಿ ಹೊಸಕೋಟೆಯಿಂದ ಬೈಕ್​ನಲ್ಲಿ ಕೆ.ಆರ್.ನಗರಕ್ಕೆ ತೆರಳುತ್ತಿದ್ದರು.

ಮಾರ್ಗಮಧ್ಯೆ ಕಾರು ಮತ್ತು ಬೈಕ್​ ಮುಖಾಮುಖಿ ಡಿಕ್ಕಿಯಾಗಿದ್ದು, ಅಣ್ಣ-ತಮ್ಮ ಇಬ್ಬರೂ ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net