

ಬೆಳಗಾವಿ: ಕಸ ಗುಡಿಸುತ್ತಿದ್ದ ಪೌರ ಕಾರ್ಮಿಕ ಮಹಿಳೆ ಮೇಲೆ ಕಾರು ಹರಿದ ಪರಿಣಾಮ ಮಹಿಳೆ ಸ್ಥಳದಲ್ಲೇ ದುರಂತ ಅಂತ್ಯಕಂಡ ಘಟನೆ ನಗರದಲ್ಲಿ ಸಂಭವಿಸಿದೆ.
ಟಿಳಕವಾಡಿಯ ಪಿ.ಕೆ.ಕ್ವಾಟ್ರನ್ನಲ್ಲಿ ವಾಸವಿದ್ದ ಅನಿತಾ ರಾಜೇಶ ಬನ್ಸ್(52) ಮೃತ ದುರ್ದೈವಿ. ಬಸವೇಶ್ವರ ವೃತ್ತದ ಬಳಿ ಎಲ್ಐಸಿ ಕಚೇರಿ ಆವರಣದಲ್ಲಿ ಎಂದಿನಂತೆ ಶುಕ್ರವಾರ ಬೆಳಗ್ಗೆ ಅನಿತಾ ಕಸ ಗುಡಿಸುತ್ತಿದ್ದರು. ಈ ವೇಳೆ ಎಲ್ಐಸಿ ಆವರಣದಿಂದ ಕಾರನ್ನು ಹೊರ ತೆಗೆಯುತ್ತಿದ್ದ ಗುರುರಾಜ ಕುಲಕರ್ಣಿ, ಕಸ ಗುಡಿಸುತ್ತಿದ್ದ ಅನಿತಾಗೆ ಗುದ್ದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಗಂಭೀರ ಗಆಯಗೊಂಡ ಅನಿತಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತರ ಕುಟುಂಬಸ್ಥರು ಹಾಗೂ ಸ್ಥಳೀಯರು ಕಾರು ಚಾಲನೆ ಮಾಡುತ್ತಿದ್ದ ಗುರುರಾಜ ಕುಲಕರ್ಣಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸ್ಥಳಕ್ಕೆ ಬಂಧ ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದರು.