ಕಾಲುವೆಗೆ ಕಾರು ಪಲ್ಟಿ, ನಾಲ್ವರು ಯುವಕರ ಸಾವು, ಇಬ್ಬರ ಸ್ಥಿತಿ ಗಂಭೀರ

accident
Published on

ಬಾಗಲಕೋಟೆ: ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಘಟಪ್ರಭಾ ಕಾಲುವೆಗೆ ಬಿದ್ದು, ಕಾರಿನಲ್ಲಿದ್ದ ನಾಲ್ವರು ದುರಂತ ಅಂತ್ಯಕಂಡಿದ್ದಾರೆ. ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ.

ಇಂತಹ ದುರ್ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಹಲಕಿ ಗ್ರಾಮದ ಬಳಿ ಗುರುವಾರ ಮಧ್ಯರಾತ್ರಿ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ಮೂಲದ 6 ಮಂದಿ ಕಾರಿನಲ್ಲಿ ಮುಧೋಳದಿಂದ ಸಾಲಹಳ್ಳಿ ಕಡೆಯತ್ತ ಹೊರಟಿದ್ದರು. ಮಾರ್ಗಮಧ್ಯೆ, ಗುರುವಾರ ಮಧ್ಯರಾತ್ರಿ 12ರ ಸುಮಾರಿನಲ್ಲಿ ಕಲ್ಲಿಗೆ ಡಿಕ್ಕಿ ಹೊಡೆದ ಕಾರು ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದಿದೆ.

ಈ ಅವಘಡದಲ್ಲಿ ಮಹಾದೇವಗೌಡ (27), ಎರಿತಾತಾ (26), ವಿಜಯ್ (26), ಸುನೀಲ (24) ಮೃತಪಟ್ಟಿದ್ದಾರೆ. ಮೃತರು ರಾಮದುರ್ಗ ತಾಲೂಕಿನ ಗುಡ್ಡಮ್ಮನಾಳ, ಮುದೇನಕೊಪ್ಪ, ಬೀಡಕಿ, ಸುನ್ನಾಳ ಗ್ರಾಮದವರು. ಸುನೀಲ ಸೇರಿ ಕಾರು ಚಾಲಕನಾಗಿದ್ದ. ಇಬ್ಬರು ಗಾಯಾಳುಗಳನ್ನು ಲೋಕಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ರೇನ್‌ ಮೂಲಕ ಕಾಲುವೆಗೆ ಬಿದ್ದಿದ್ದ ಕಾರನ್ನು ಕ್ರೇನ್​ ಮೂಲಕ ಮೇಲಕ್ಕೆ ಎತ್ತಲಾಗಿದೆ. ಮೃತದೇಹಗಳನ್ನು ಶವಾಗಾರಕ್ಕೆ ರವಾನಿಸಲಾಗಿದೆ. ಲೋಕಾಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net