ಕ್ಯಾಂಟರ್​ನಲ್ಲಿ ಮಲಗಿದ್ದವರ ಮೇಲೆ ತೊಗರಿ ಮೂಟೆಗಳು ಬಿದ್ದು ಸ್ಥಳದಲ್ಲೇ ಯುವಕರಿಬ್ಬರ ಸಾವು!

death case
Published on

ನೆಲಮಂಗಲ: ಸಾವು ಯಾವಾಗ, ಯಾವ ರೂಪದಲ್ಲಿ ಬರುತ್ತೆ ಎಂದು ಊಹಿಸಿಕೊಳ್ಳಲು ಅಸಾಧ್ಯ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ.

ಸರಕು ಸಾಗಾಟ ವಾಹನದಲ್ಲಿ ಮಲಗಿದ್ದ ಯುವಕರಿಬ್ಬರ ಮೇಲೆ ತೊಗರಿಬೇಳೆ ರೂಪದಲ್ಲಿ ಬಂದ ಜವರಾಯ ಇಬ್ಬರ ಪ್ರಾಣ ತೆಗೆದಿದ್ದಾನೆ. ಹೌದು, ತೊಗರಿಬೇಳೆ ಮೂಟೆಗಳನ್ನು ತುಂಬಿದ್ದ ವಾಹನದಲ್ಲಿ ಸಿಂಧನೂರು ಮೂಲದ ಶಂಕರ್(28) ಮತ್ತು ಗಂಗಾವತಿ ಮೂಲದ ವಾಜಿದ್ ಅಲಿ(20) ಮಲಗಿಕೊಂಡು ಪ್ರಯಾಣಿಸುತ್ತಿದ್ದರು.

ಮಲಗಿದ್ದ ಯುವಕರಿಬ್ಬರ ಮೇಲೆ ಮೂಟೆಗಳು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನೆಲಮಂಗಲ ನಗರದ ಜಕ್ಕಸಂದ್ರ ಬಳಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಮೃತದೇಹಗಳನ್ನು ನೆಲಮಂಗಲ ಶವಾಗಾರಕ್ಕೆ ರವಾನಿಸಲಾಗಿದೆ. ನೆಲಮಂಗಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net