ಮಂಗಳೂರಿನ ಉದ್ಯಮಿ ನಾಪತ್ತೆ

missing new
Published on

ಮಂಗಳೂರು: ನಗರದ ಬಲ್ಮಠದಲ್ಲಿ ಗೇಮಿಂಗ್ ಶಾಪ್ ಹೊಂದಿದ್ದ ಮೊಹಮ್ಮದ್ ಶಬೀಬ್ (35) ಎಂಬುವರು ನಾಪತ್ತೆಯಾಗಿದ್ದಾರೆ. ದಸರಾ ರಜೆಯ ನಿಮಿತ್ತ ಸೆ.26ರಂದು ಅವರ ಪತ್ನಿ ಕೇರಳದ ಕೊಚ್ಚಿಯ ತಾಯಿ ಮನೆಗೆ ಹೋಗಿದ್ದು, ಪ್ರತಿ ದಿನ ಗಂಡನ ಜತೆ ಮಾತನಾಡುತ್ತಿದ್ದರು. ಅ.2ರಂದು ಬೆಳಗ್ಗೆ ಗಂಡನ ಮೊಬೈಲ್‌ಗೆ ಕರೆ ಮಾಡಿ ಮಾತನಾಡಿದ್ದು, ಸಂಜೆ ಮಾಡಿದಾಗ ಸ್ವಿಚ್ ಆಫ್ ಬಂದಿದೆ. ರಾತ್ರಿ 9.30ಕ್ಕೆ ಸಂಬಂಧಿ ಅಸ್ಪಾಕ್ ಅಹಮ್ಮದ್ ಎಂಬುವರಿಗೆ ಕರೆ ಮಾಡಿ ಪರಿಶೀಲಿಸಲು ತಿಳಿಸಿದಾಗ ಮನೆ ಲಾಕ್ ಆಗಿದ್ದು, ಅಂಗಡಿಯ ಪಾರ್ಕಿಂಗ್ ಸ್ಥಳದಲ್ಲಿ ಸ್ಕೂಟರ್ ಕಂಡು ಬಂದಿದೆ. ಸಿಸಿ ಕೆಮರಾ ಪರಿಶೀಲಿಸಿದಾಗ 2ರಂದು ಸಂಜೆ 6 ಗಂಟೆಗೆ ಸ್ಕೂಟರ್ ನಿಲ್ಲಿಸಿ ನಡೆದುಕೊಂಡು ಹೋಗುವುದು ಕಂಡು ಬಂದಿದೆ. ಪತ್ನಿ ಮನೆಗೆ ಬಂದು ಪರಿಶೀಲಿಸಿದಾಗ ಮೊಬೈಲ್ ಹಾಳಾದ ಸ್ಥಿತಿಯಲ್ಲಿ ಮನೆಯಲ್ಲಿ ಇತ್ತು. ಈ ಬಗ್ಗೆ ಕದ್ರಿ ಠಾಣೆಗೆ ದೂರು ನೀಡಿದ್ದು, ಮಧುಮೇಹ ಕಾಯಿಲೆಯಿಂದ ಮನನೊಂದು ಅಥವಾ ಷೇರು ವ್ಯವಹಾರದಿಂದ ಬೇಸತ್ತು ಮನೆ ಬಿಟ್ಟು ಹೋಗಿರ ಬಹುದು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net