ಪರಿಶಿಷ್ಟರಿಗೆ ಬಂಪರ್ ಕೊಡುಗೆ: ಮತ್ತೆ 13 ಸಾವಿರ ಪೌರ ನೌಕರರ ಕಾಯಂ, ವಾಹನ ಖರೀದಿಗೆ 250 ಕೋಟಿ ರೂ.

CM bommai
Published on

ಬೆಂಗಳೂರು: ಮತ್ತೆ 13 ಸಾವಿರ ಪೌರ ಕಾರ್ವಿುಕರ ಕಾಯಂ, ವಾಹನ ಖರೀದಿಗೆ 250 ಕೋಟಿ ರೂ. ಅನುದಾನ, ಹಾಸ್ಟೆಲ್​ಗಳಿಗೆ ಶಂಕುಸ್ಥಾಪನೆ ಸೇರಿ ಎಸ್​ಸಿ, ಎಸ್​ಟಿ ಸಮುದಾಯವರಿಗೆ ಸಿಎಂ ಬಸವರಾಜ ಬೊಮ್ಮಾಯಿ ವಿಶೇಷ ಕೊಡುಗೆಗಳನ್ನು ಘೋಷಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಗುರುವಾರ ವಿಧಾನಸೌಧದಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಹಲವು ಘೋಷಣೆ ಮಾಡಿದರು. ರಾಜ್ಯದಲ್ಲಿ 24 ಸಾವಿರ ಪೌರಕಾರ್ವಿುಕರನ್ನು ಕಾಯಂ ಮಾಡಿರುವುದು ಸರ್ಕಾರದ ಕ್ರಾಂತಿಕಾರಿ ತೀರ್ವನವಾಗಿದೆ ಎಂದು ಬೊಮ್ಮಾಯಿ ಬಣ್ಣಿಸಿದರು.

ಮೊದಲ ಹಂತದಲ್ಲಿ 11,141 ಪೌರಕಾರ್ವಿುಕರನ್ನು ಕಾಯಂ ಮಾಡಿ ಆದೇಶಿಸಿದ್ದೆ. ಅವರೆಲ್ಲರಿಗೂ ಆದೇಶಪತ್ರಗಳು ರವಾನೆಯಾಗಿವೆ. ಎರಡನೇ ಕಂತಿನಲ್ಲಿ 13 ಸಾವಿರ ಪೌರಕಾರ್ವಿುಕರನ್ನು ಕಾಯಂ ಮಾಡುವ ಮತ್ತೊಂದು ಆದೇಶ ಹೊರಡಿಸಿದ್ದೇನೆ. ಇದರಿಂದ ಒಟ್ಟು 24 ಸಾವಿರ ಪೌರಕಾರ್ವಿುಕರನ್ನು ಕಾಯಂ ಮಾಡಿದಂತಾಗುತ್ತದೆ ಎಂದು ವಿವರ ನೀಡಿದರು.

ಪೌರ ನೌಕರರ ಸ್ಥಾನಮಾನ: ತಲೆತಲಾಂತರದಿಂದಲೂ ಊರನ್ನು ಸ್ವಚ್ಛ ಮಾಡುವ ಪೌರ ಕಾರ್ವಿುಕರು ದಯನೀಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಅವರ ಬಗ್ಗೆ ಯಾರೂ ಚಿಂತಿಸಲಿಲ್ಲ. ಅವರ ಸೇವೆಯನ್ನು ಕಾಯಂ ಮಾಡಲು ವಿಶೇಷ ನಿಯಮಗಳನ್ನು ರೂಪಿಸಿ ಅನುಷ್ಠಾನ ಮಾಡಲಾಯಿತು. ಆ ಮೂಲಕ ಪೌರ ಕಾರ್ವಿುಕರೆಲ್ಲರೂ ಪೌರ ನೌಕರರ ಸ್ಥಾನಮಾನ ಪಡೆದಿದ್ದಾರೆ. ಇನ್ನು ಮುಂದೆ ಅವರನ್ನು ಪೌರ ನೌಕರರು ಎಂದೇ ಕರೆಯಬೇಕು ಎಂದು ತೀರ್ವನಿಸಿದ್ದು, ಅವರ ಬಗ್ಗೆ ನಮಗಿರುವ ಬದ್ಧತೆ ತೋರಿಸಿದ್ದೇವೆ. ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ನಾವು ಈ ಪ್ರಯತ್ನ ಮಾಡಿದ್ದೇವೆ. ಸ್ವಾತಂತ್ರ್ಯಪೂರ್ವದಿಂದಲೂ, ಮಾನಸಿಕವಾಗಿ, ಸಾಮಾಜಿಕವಾಗಿ ಆರ್ಥಿಕವಾಗಿ ತುಳಿತಕ್ಕೊಳಪಟ್ಟ ಸಮಾಜಗಳಿಗೆ ಅಂಬೇಡ್ಕರ್ ಆಶಯದಂತೆ ನ್ಯಾಯ ದೊರಕಿಸಿಕೊಡುವ ಪ್ರಯತ್ನ ಮಾಡಿದ್ದೇವೆ ಎಂದು ಹೇಳಿದರು.

5 ಕಡೆ ಮೆಗಾ ಹಾಸ್ಟೆಲ್

ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿಯಲ್ಲಿ 1 ಸಾವಿರ ಸಾಮರ್ಥ್ಯ ಇರುವ 5 ಮೆಗಾ ಹಾಸ್ಟೆಲ್ ಗಳನ್ನು ತೆರೆಯಲಾಗುತ್ತಿದೆ. ಮುಂದಿನ 5 ವರ್ಷ 5 ಸಾವಿರ ಮಕ್ಕಳು ಸೇರಿ 25 ಸಾವಿರ ಮಕ್ಕಳಿಗೆ ಅನುಕೂಲವಾಗುವ ಯೋಜನೆ ಇದಾಗಿದೆ. 640 ಕೋಟಿ ರೂ. ವೆಚ್ಚದಲ್ಲಿ ನೂರು ಹಾಸ್ಟೆಲ್, 500 ಕೋಟಿ ರೂ. ವೆಚ್ಚದಲ್ಲಿ 5 ಮೆಗಾ ಹಾಸ್ಟೆಲ್ ನಿರ್ವಿುಸಲಾಗುತ್ತಿದೆ ಎಂದರು.

ಸಾಮಾಜಿಕ ಲೆಕ್ಕ ಪರಿಶೋಧನೆ

ಮೀಸಲಾತಿ ಮತ್ತು ಸಮುದಾಯಗಳಿಗೆ ನೀಡಿರುವ ಸರ್ಕಾರದ ಕಾರ್ಯಕ್ರಮಗಳು ಎಷ್ಟರಮಟ್ಟಿಗೆ ಮುಟ್ಟಿದೆ? ಎಷ್ಟು ಜನರ ಜೀವನಮಟ್ಟ ಉತ್ತಮಗೊಂಡಿದೆ? ಅವಕಾಶಗಳು ಯಾವ ಜನಾಂಗಕ್ಕೆ ದೊರೆತಿವೆ ಎಂಬ ಬಗ್ಗೆ ಸಾಮಾಜಿಕ ಲೆಕ್ಕಪರಿಶೋಧನೆ ಆಗಬೇಕು ಎಂದು ಸಿಎಂ ಅಬಿಪ್ರಾಯಪಟ್ಟರು.

ಉಪಸ್ಥಿತರು:

ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಚಂದ್ರ, ಸಚಿವ ಮುರುಗೇಶ್ ನಿರಾಣಿ, ಕೆ.ಎಸ್.ಆರ್.ಟಿ. ಸಿ ಅಧ್ಯಕ್ಷ ಚಂದ್ರಪ್ಪ, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೂಳಿಹಟ್ಟಿ ಶೇಖರ್, ಸಫಾಯಿ ಕರ್ಮಚಾರಿ ನಿಗಮದ ಅಧ್ಯಕ್ಷ ವೆಂಕಟೇಶ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್ ಮೊದಲಾದವರು ಉಪಸ್ಥಿತರಿದ್ದರು.

31 ಸಾವಿರ ಕೋಟಿ ರೂ. ಅನುದಾನ

ಎಸ್​ಸಿ, ಎಸ್​ಟಿ ಸಮುದಾಯಕ್ಕೆ 31 ಸಾವಿರ ಕೋಟಿ ರೂ.ಗಳನ್ನು ಎಸ್​ಸಿಎಸ್​ಪಿ/ ಟಿಎಸ್​ಪಿ ಯೋಜನೆಯಡಿ ಮೀಸಲಿಡಲಾಗಿದೆ. ಇದಲ್ಲದೆ ಪಿ.ಟಿ.ಸಿ.ಎಲ್ ಕಾನೂನು ತಿದ್ದುಪಡಿ ಮಾಡಬೇಕೆಂಬ ಬೇಡಿಕೆ ಇತ್ತು. ಅದನ್ನು ಕೂಡ ಕಾರ್ಯಗತ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದರು. ಜಮೀನು ಕೊಳ್ಳಲು 20 ಲಕ್ಷ ರೂ., 2 ಲಕ್ಷ ರೂ ಮನೆ ನಿರ್ವಣಕ್ಕೆ, 75 ಯೂನಿಟ್ ಉಚಿತ ವಿದ್ಯುಚ್ಛಕ್ತಿ ಸೇರಿದಂತೆ ಹಲವಾರು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಎಸ್​ಸಿ, ಎಸ್​ಟಿ ಗುತ್ತಿಗೆದಾರರಿಗೆ 1 ಕೋಟಿ ರೂ.ವರೆಗೆ ಹೆಚ್ಚಳ ಮಾಡಲಾಗಿದೆ ಎಂದು ಸಿಎಂ ಹೇಳಿದರು.

ಏಕಕಾಲಕ್ಕೆ 100 ಹಾಸ್ಟೆಲ್

ನೂರು ವಿದ್ಯಾರ್ಥಿ ನಿಲಯಗಳನ್ನು ಏಕಕಾಲಕ್ಕೆ ಪ್ರಾರಂಭಿಸಿದ್ದು, ನಿಗದಿತ ಸಮಯಕ್ಕೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. 50 ಕನಕದಾಸ ಹಾಸ್ಟೆಲ್​ಗಳಿಗೆ ಮಂಜೂರಾತಿ ನೀಡಲಾಗಿದೆ. ವಿದ್ಯಾಸಿರಿ ಯೋಜನೆಯಡಿ 33 ಸಾವಿರ ವಿದ್ಯಾರ್ಥಿಗಳಿಗೆ 59 ಕೋಟಿ ರೂ.ಗಿಂತ ಹೆಚ್ಚು ಅನುದಾನ ನೀಡಿ ಹಾಸ್ಟೆಲ್​ಗಳಲ್ಲಿ ಪ್ರವೇಶ ಕಲ್ಪಿಸಲಾಗಿದೆ. ಇದರಿಂದ 33 ಸಾವಿರ ಮಕ್ಕಳಿಗೆ ಅನುಕೂಲವಾಗಿದೆ. ಈ ವರ್ಷ ಒಂದು ಲಕ್ಷ ಮಕ್ಕಳಿಗೆ ಹಾಸ್ಟೆಲ್​ಗಳಲ್ಲಿ ಪ್ರವೇಶ ದೊರಕಿಸಲಾಗುತ್ತಿದೆ.

ಪ್ರತಿ ಕ್ಷೇತ್ರಕ್ಕೆ 100 ವಾಹನ

ಸ್ವಯಂ ಉದ್ಯೋಗಕ್ಕೆ ನಿಗಮಗಳಲ್ಲಿ ಹಲವು ಕಾರ್ಯಕ್ರಮಗಳಿವೆ. ಎಸ್ಸಿ, ಎಸ್ಟಿ ಸಮುದಾಯದವರಿಗೆ ವ್ಯಾಪಾರ ಮಾಡಲು ವಾಹನ ನೀಡಬೇಕೆಂಬ ಯೋಜನೆ ಎಂದು ಬಜೆಟ್​ನಲ್ಲಿ ಇಲ್ಲದಿದ್ದರೂ 250 ಕೋಟಿ ರೂ ಅನುದಾನ ನೀಡಲಾಗಿದೆ. ಬಾಬು ಜಗಜೀವನ್ ರಾಂ ಅವರ ಹೆಸರಿನಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 100 ದ್ವಿಚಕ್ರ ವಾಹನ ಒದಗಿಸಲಾಗುತ್ತಿದೆ.

17000 ಜನರಿಗೆ ಗಂಗಾಕಲ್ಯಾಣ

ರಾಜ್ಯದಲ್ಲಿ 17 ಸಾವಿರ ಜನರಿಗೆ ಗಂಗಾಕಲ್ಯಾಣ ಯೋಜನೆ ಮಂಜೂರಾಗಿದ್ದು, 595 ಕೋಟಿ ರೂ. ಅನುದಾನ ನೀಡಲಾಗಿದೆ. ಮೊದಲ ಹಂತದಲ್ಲಿ 8 ಸಾವಿರ ಫಲಾನುಭವಿಗಳಿಗೆ 75 ಸಾವಿರ ರೂ.ಗಳನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ಇದರಿಂದಾಗಿ ಫಲಾನುಭವಿಗಳೇ ಕೊಳವೆಬಾವಿ ಕೊರೆಸಿ, ಪಂಪ್ ಹಾಕಿಸಿಕೊಂಡು ವಿದ್ಯುದೀಕರಣ ಮಾಡಿಸಿಕೊಳ್ಳಬಹುದು ಎಂದು ಸಿಎಂ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net