More

    ದೈಹಿಕ ಸಂಬಂಧ ಬೆಳೆಸುವುದಾಗಿ ಮನೆಗೆ ಕರೆದು ಹಣ ಸುಲಿಗೆ: ಇಬ್ಬರು ಮಹಿಳೆಯರು ಸೇರಿ 6 ಮಂದಿ ಸೆರೆ

    ಬೆಂಗಳೂರು: ದೈಹಿಕ ಸಂಬಂಧ ಬೆಳೆಸುವುದಾಗಿ ಖಾಸಗಿ ಕಂಪನಿ ಉದ್ಯೋಗಿಯನ್ನು ಮನೆಗೆ ಕರೆಸಿಕೊಂಡು ಹನಿಟ್ರ್ಯಾಪ್ ಮಾಡಿದ್ದ ಇಬ್ಬರು ಮಹಿಳೆಯರು ಸೇರಿ ಆರು ಮಂದಿಯನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ.

    ಮೈಸೂರು ಜಿಲ್ಲೆ ಯಾಚೇನಹಳ್ಳಿಯ ವೈ.ಎಂ. ಅನಿಲ್‌ಕುಮಾರ್ (37), ಮೈಸೂರು ರಸ್ತೆ ಬ್ಯಾಟರಾಯನಪುರದ ಶಿವಶಂಕರ್ (50), ಕುಣಿಗಲ್ ತಾಲೂಕು ನೊರಜನಕುಪ್ಪೆಯ ಗಿರೀಶ್ (36) ಮತ್ತು ರಾಜಾಜಿನಗರದ ರಾಮಮೂರ್ತಿ (37) ಮತ್ತು ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಕೈತುಂಬಾ ಸಂಬಳವಿದ್ರೂ ಮಾಡಬಾರದನ್ನು ಮಾಡಿ ಸಿಕ್ಕಿಬಿದ್ದ ಗ್ಲಾಮರಸ್​ ಕೃಷಿ ಅಧಿಕಾರಿ! ಏನ್​ ಕೇಳಿದ್ರು ಬಾಯ್ಬಿಡ್ತಿಲ್ಲ…

    ದೂರುದಾರ ಖಾಸಗಿ ಕಂಪನಿ ಉದ್ಯೋಗಿಗೆ ವೆಬ್‌ಸೈಟ್‌ನಲ್ಲಿ ಅಪರಿಚಿತ ಮಹಿಳೆ ಪರಿಚಯ ಆಗಿ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡಿದ್ದಾರೆ. ಆನಂತರ ಚಾಟ್ ಶುರು ಮಾಡಿ ಅರೆಬೆತ್ತಲೆ ಫೋಟೋಗಳನ್ನು ಕಳುಹಿಸಿ ದೈಹಿಂಕ ಸಂಪರ್ಕ ಬೆಳೆಸಲು ದೂರುದಾರನಿಗೆ ಮಹಿಳೆ ಆಹ್ವಾನ ನೀಡಿದ್ದಾಳೆ. ಅದಕ್ಕೆ ಒಪ್ಪಿಕೊಂಡ ದೂರುದಾರ, 2022ರ ಬೆಳಗ್ಗೆ 10.45ಕ್ಕೆ ಬೇಗೂರಿನ ದೇವರಚಿಕ್ಕನಹಳ್ಳಿ ರಾಯಲ್ ಶೆಲ್ಟರ್ಸ್ ಲೇಔಟ್‌ನಲ್ಲಿ ಇದ್ದ ಮಹಿಳೆಯ ಮನೆಗೆ ಹೋಗಿದ್ದಾನೆ. ಬೆಡ್ ರೂಮ್‌ನಲ್ಲಿ ದೂರುದಾರ ಕುಳಿತಿದ್ದಾಗ ಇತರ ಆರೋಪಿಗಳು ಏಕಾಏಕಿ ಒಳಗೆ ನುಗ್ಗಿ ಅರೆಬೆತ್ತಲೆ ಮಾಡಿ ಫೋಟೋಗಳನ್ನು ಸೆರೆ ಹಿಡಿದುಕೊಂಡಿದ್ದಾರೆ.

    ಮಹಿಳೆ ಜತೆಗಿದ್ದ ಪೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಸಿ 10 ಲಕ್ಷ ರೂ.ಗೆ ಬೇಡಿಕೆ ಒಡ್ಡಿದ್ದ. ಕೊನೆಗೆ ಚೌಕಾಸಿ ನಡೆಸಿ ಕೊನೆಗೆ 3 ಲಕ್ಷ ರೂ.ಗೆ ಒಪ್ಪಿಕೊಂಡು ಸ್ನೇಹಿತರ ಮೂಲಕದ ಫೋನ್ ಪೇ ಮತ್ತು ಗೂಗಲ್ ಪೇನಲ್ಲಿ 2.90 ಲಕ್ಷ ರೂ. ಅನ್ನು ಆರೋಪಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿದ್ದ.

    ಇದಾದ ಮೇಲೆ ದೂರುದಾರ ತನ್ನ ಬಳಿಯಿದ್ದ 10 ಸಾವಿರ ರೂ. ಅನ್ನು ಆರೋಪಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದ. ಕೊನೆಗೆ ಪೊಲೀಸರಿಗೆ ದೂರು ಕೊಟ್ಟರೇ ಮಹಿಳೆಯರ ಜತೆಗಿದ್ದ ಫೋಟೋಗಳನ್ನು ವೈರಲ್ ಮಾಡಿ ಮರ್ಯಾದೆ ತೆಗೆಯುವುದಾಗಿ ಬೆದರಿಸಿ ಆರೋಪಿಗಳು ಕಳುಹಿಸಿದ್ದರು.

    ಇದನ್ನೂ ಓದಿ: ರಾತ್ರಿ ವೇಳೆ ಪ್ರಯಾಣಿಸುವವರಿಗೆ ರೈಲ್ವೆ ಇಲಾಖೆಯಿಂದ ಹೊಸ ರೂಲ್ಸ್! ಉಲ್ಲಂಘಿಸಿದ್ರೆ ಕಠಿಣ ಕ್ರಮ​ದ ಎಚ್ಚರಿಕೆ

    ನೊಂದ ಖಾಸಗಿ ಕಂಪನಿ ಉದ್ಯೋಗಿ, ಈ ಕುರಿತು ಪೊಲೀಸರಿಗೆ ದೂರು ಸಲ್ಲಿಸಿದ್ದರು. ತನಿಖೆ ಕೈಗೊಂಡ ಇನ್‌ಸ್ಪೆಕ್ಟರ್ ಎಚ್.ಡಿ. ಅನಿಲ್‌ಕುಮಾರ್ ನೇತೃತ್ವದ ತಂಡ ಆರೋಪಿಗಳ ಕುರಿತ ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ.

    ಕೆಲಸ ಇಲ್ಲದೆ ಸುತ್ತಾಡುತ್ತಿದ್ದ ಆರೋಪಿಗಳು ಮತ್ತು ಮಹಿಳೆಯೊಂದಿಗೆ ಸೇರಿಕೊಂಡು ಹನಿಟ್ರ್ಯಾಪ್ ದಂಧೆ ನಡೆಸುತ್ತಿದ್ದರು. ಆರೋಪಿಗಳ ವಿಚಾರಣೆ ನಡೆಯುತ್ತಿದ್ದು, ಇದೇ ರೀತಿ ಯಾರಿಗಾದರೂ ಬ್ಲ್ಯಾಕ್‌ಮೇಲ್ ಮಾಡಿದ್ದಾರ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    KGF​​ ಬಗ್ಗೆ ಟಾಲಿವುಡ್​ ನಿರ್ದೇಶಕನ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಪ್ರಶಾಂತ್​ ನೀಲ್​ ಹಳೇ ವಿಡಿಯೋ ವೈರಲ್​!

    ದಕ್ಷಿಣ ಭಾರತ ಸಿನಿಮಾರಂಗದಿಂದ ಗೋವಾ ಬ್ಯೂಟಿ ಇಲಿಯಾನಾ ಡಿ ಕ್ರೂಸ್ ಬ್ಯಾನ್​! ಕಾರಣ ಹೀಗಿದೆ….

    Success Story | ಮೊದಲ ಪ್ರಯತ್ನದಲ್ಲೇ ಯಶಸ್ಸು; ತಂದೆಯ ಕೆಲಸದ ಸ್ಫೂರ್ತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿದ್ರು ಈ ಅಧಿಕಾರಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts