ಹೌದು ಬಿಡಿ... ಅಲ್ಲಿ ಪಾಠ ಕಲಿತು, ಇಲ್ಲಿ ಬ್ಲೂ ಫಿಲ್ಮಂ ನೋಡಿದವರು ನೀವು...

Session
Published on

ಬೆಂಗಳೂರು: ನಾಗ್ಪುರದಲ್ಲಿ ಸಂಸ್ಕೃತಿಯ ಪಾಠ ಕಲಿತು ಬಂದು, ಇಲ್ಲಿ ಬ್ಲೂ ಫಿಲ್ಮಂ ನೋಡಿದವರು ನೀವು ಎಂದು ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್​ ಅವರು ಬಿಜೆಪಿಯ ಲಕ್ಷ್ಮಣ್​ ಸವದಿಗೆ ಟಾಂಗ್​ ನೀಡಿದರು.

ಬಜೆಟ್​ ಕುರಿತು ವಿಧಾನಸೌಧದಲ್ಲಿ ಮಂಗಳವಾರ ಚರ್ಚೆ ಮಾಡುತ್ತಿದ್ದ ಮರಿತಿಬ್ಬೇಗೌಡರು, ರೈತರು ಜಿಡಿಪಿಗೆ ಶೇ.14 ಕೊಡುಗೆ ನೀಡುತ್ತಾರೆ. ಬಜೆಟ್​ನಲ್ಲಿ ರೈತರಿಗೆ ನೀಡಿರುವುದು ಕೇವಲ ಶೇ.3. ಇದು ರೈತ ವಿರೋಧಿ ಬಜೆಟ್​ ಎಂದರು. ಆಗ ಗರಂ ಆದ ಬಿಜೆಪಿ ಸದಸ್ಯ ಎನ್​.ರವಿ, ಸುಳ್ಳು ಏಕೆ ಹೇಳುತ್ತೀರಿ? ನಿಜ ಹೇಳಿ ಎಂದರು.

ನಾವಲ್ಲ, ನೀವು ನಾಗ್ಪುರ ತರಬೇತಿ ಕೇಂದ್ರದಿಂದ ಸುಳ್ಳು ಹೇಳುವುದನ್ನೇ ಕಲಿತಿದ್ದೀರಿ ಬಿಡಿ ಎಂದು ಹರಿಪ್ರಸಾದ್​ ಹೇಳಿದರು. ಇದಕ್ಕೆ ಧ್ವನಿಗೂಡಿಸಿ ಲಕ್ಷ್ಮಣ್​ ಸವದಿ, ಹೌದು. ನಾವು ನಾಗ್ಪುರದಲ್ಲೇ ಕಲಿತು ಬಂದದ್ದು ಏನೀಗಾ? ಎಂದರು. ಈ ವೇಳೆ ಹರಿಪ್ರಸಾದ್​, ಹೌದು ಬಿಡಿ ಅಲ್ಲಿ ಕಲಿತು ಬಂದು ಇಲ್ಲಿ ಕುಳಿತು ಬ್ಲೂ ಫಿಲ್ಮಂ ನೀಡಿದ್ದೀರಿ ಎನ್ನುತ್ತಿದ್ದಂತೆ ಲಕ್ಷ್ಮಣ್​ ಸವದಿ ಸುಮ್ಮನಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net