ಸಮಾನತೆಗಾಗಿ ಹೋರಾಡಿದ್ದ ಧೀಮಂತ ನಾಯಕ

blm
Published on

ಕಾರ್ಕಳ: ಅಂಬೇಡ್ಕರ್ ಅವರು ಸಂವಿಧಾನ ರಚನೆ ಜತೆಗೆ ಹಲವು ಆಧುನಿಕ ಯೋಜನೆಗಳಿಗೆ ಕಾರಣರಾಗಿದ್ದಾರೆ. ಸಮಾನತೆಗಾಗಿ ಹೋರಾಡಿದ ನಾಯಕರಾಗಿದ್ದು, ಅವರ ವಿರುದ್ದ ಕೆಲವರು ಅಪಪ್ರಚಾರ ಮಾಡುತ್ತಿರುವುದು ಬೇಸರದ ವಿಚಾರ ಎಂದು ಸುಧಾಕರ ದಾನಶಾಲೆ ಹೇಳಿದರು.

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಮಾತನಾಡಿ, ಸಂವಿಧಾನದ ನಿಜವಾದ ಆಶಯಗಳು ಇಂದು ಈಡೇರುತ್ತಿಲ್ಲ. ಜಾತಿ ಅಸಮಾನತೆಗಳು ಮುಂದುವರಿಯುತ್ತಿರುವುದು ಬೇಸರದ ಸಂಗತಿ ಎಂದರು.

ಬ್ಲಾಕ್ ಕಾಂಗ್ರೆಸ್‌ನ ಕಾನೂನು ಘಟಕ ಅಧ್ಯಕ್ಷ ರೆಹಮತುಲ್ಲಾ, ಪ್ರಮುಖರಾದ ಪ್ರಭಾಕರ ಬಂಗೇರ, ಸುಭಿತ್ ಎನ್.ಆರ್., ಪ್ರತಿಮಾ ರಾಣೆ, ಪ್ರಭಾ ಕಿಶೋರ್, ಮುರಳಿ ರಾಣೆ, ವಿವೇಕಾನಂದ ಶೆಣೈ, ಸುನಿತಾ ಶೆಟ್ಟಿ, ಅಶ್ಪಕ್ ಅಹಮದ್, ರಾಜೇಂದ್ರ ದೇವಾಡಿಗ, ರುಕ್ಮಾಯ ಶೆಟ್ಟಿಗಾರ್, ಸುದರ್ಶನ್ ಬಂಗೇರ, ಮಂಜುನಾಥ ಜೋಗಿ ಉಪಸ್ಥಿತರಿದ್ದರು.

ರಮೇಶ್ ಬೆಜಕಳ ಧ್ಯೇಯ ಗೀತೆ ಹಾಡಿದರು. ಅನಿಲ್ ಪೂಜಾರಿ ನೆಲ್ಲಿಗುಡ್ಡೆ ಸ್ವಾಗತಿಸಿದರು. ಪ್ರದೀಪ್ ಬೇಲಾಡಿ ವಂದಿಸಿದರು. ನಾಗೇಶ ಆಚಾರ್ಯ ಬೆಳ್ಮಣ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net