

ಉಪ್ಪಿನಬೆಟಗೇರಿ: ಸಮಾಜದಲ್ಲಿ ನಮ್ಮ ಅಕ್ಕ- ತಂಗಿಯರು ಕಟ್ಟುವ ರಾಖಿಯು ಸಹೋದರತ್ವವವನ್ನು ಗಟ್ಟಿಗೊಳಿಸುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಧಾರವಾಡ ಜಿಲ್ಲಾ ಬೌದ್ಧಿಕ ಪ್ರಮುಖ ನಿತೀಶ ಡಂಬಳ ಹೇಳಿದರು.
ಗ್ರಾಮದ ಜೈನ ಬಸದಿಯ ಸಭಾ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಕ್ಷಾ ಬಂಧನ (ನೂಲ ಹುಣ್ಣಿಮೆ) ಉತ್ಸವದ ಬೌದ್ಧಿಕ ಪ್ರಮುಖರಾಗಿ ಮಾತನಾಡಿದರು.
ಉಪ್ಪಿನಬೆಟಗೇರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ಮಸೂತಿ ಅತಿಥಿಯಾಗಿ ಮಾತನಾಡಿದರು.
ಈ ವೇಳೆ ಸ್ವಯಂ ಸೇವಕರು ಪರಸ್ಪರ ರಕ್ಷೆಯನ್ನು ಕಟ್ಟಿ ರಕ್ಷಾ ಬಂಧನ ಉತ್ಸವ ಆಚರಿಸಿದರು. ಗುರನಗೌಡ ಪಾಟೀಲ, ಶಿವಾನಂದ ದೇಶನೂರ, ಪ್ರಕಾಶ ತಳವಾರ, ಅಣ್ಣಪ್ಪ ನೀಲವಾನಿ, ಆಕಾಶ ಅಷ್ಟಗಿ, ಶಂಕರ ಕಿತ್ತೂರ ಹಾಗೂ ಅಭಿಷೇಕ ನವಲಗುಂದ ಹಾಗೂ ಸ್ವಯಂ ಸೇವಕರು, ಗ್ರಾಮಸ್ಥರು ಇದ್ದರು.