

ಬೆಂಗಳೂರು: ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ರಚನೆ ಕಸರತ್ತು ಕ್ಲೈಮಾಕ್ಸ್ ಹಂತಕ್ಕೆ ತಲುಪಿದ್ದು, ಇನ್ನೊಂದು ಗಂಟೆಯಲ್ಲಿ ಯಾರಿಗೆಲ್ಲ ಮಂತ್ರಿ ಪಟ್ಟ ಸಿಕ್ಕಿದೆ ಎಂಬುದು ಅಧಿಕೃತವಾಗಿ ತಿಳಿಯಲಿದೆ. ಆದರೆ, ಈ ಬಾರಿ ಡಿಸಿಎಂ ಹುದ್ದೆ ಇಲ್ಲ ಎಂಬ ಮತ್ತೊಂದು ಮಾಹಿತಿ ಲಭ್ಯವಾಗಿದ್ದು, ಕೊನೇ ಕ್ಷಣದಲ್ಲಿ ಬದಲಾದರೂ ಅಚ್ಚರಿ ಇಲ್ಲ.
ಇಂದು ಮಧ್ಯಾಹ್ನ 2.15ಕ್ಕೆ ನೂತನ ಸಚಿವರ ಪದಗ್ರಹಣ ಕಾರ್ಯಕ್ರಮ ನಡೆಯಲಿದ್ದು, ಸಚಿವ ಸ್ಥಾನಕ್ಕೆ ಆಯ್ಕೆ ಆಗಿರುವವರಿಗೆ ಸಿಎಂ ನೇರವಾಗಿ ಕರೆ ಮಾಡಿ ತಿಳಿಸಿರುವ ಈವರೆಗಿನ ಪಟ್ಟಿ ಇಲ್ಲಿದೆ.
ಕೆ.ಎಸ್.ಈಶ್ವರಪ್ಪ
ಆರ್.ಅಶೋಕ್
ಅರವಿಂದ ಲಿಂಬಾವಳಿ
ಡಾ.ಸಿ.ಎನ್.ಅಶ್ವತ್ಥ ನಾರಾಯಣ
ಬಿ.ಶ್ರೀರಾಮುಲು
ಉಮೇಶ್ ಕತ್ತಿ
ಬಿ.ಸಿ.ಪಾಟೀಲ್
ಎಸ್.ಟಿ.ಸೋಮಶೇಖರ್
ಡಾ.ಕೆ.ಸುಧಾಕರ್
ಬೈರತಿ ಬಸವರಾಜ
ಮುರುಗೇಶ್ ನಿರಾಣಿ
ಶಿವರಾಂ ಹೆಬ್ಬಾರ್
ಶಶಿಕಲಾ ಜೊಲ್ಲೆ
ಕೆಸಿ ನಾರಾಯಣ್ ಗೌಡ
ಸುನೀಲ್ ಕುಮಾರ್
ಅರಗ ಜ್ಞಾನೇಂದ್ರ
ಇನ್ನು ಇಂದು ಬೆಳಗ್ಗೆ 11ಕ್ಕೆ ಸುದ್ದಿಗೋಷ್ಠಿ ನಡೆಸುವ ಸಿಎಂ ಬೊಮ್ಮಾಯಿ, ಸಚಿವರ ಪಟ್ಟಿ ಪ್ರಕಟಿಸಲಿದ್ದಾರೆ. ಹೆಚ್ಚಿನ ಡಿಸಿಎಂ ಹುದ್ದೆಗಳ ಸೃಷ್ಟಿಯಿಂದ ಆಡಳಿತದಲ್ಲಿ ಇಂಟರ್ಫಿಯರ್ಸ್ ಜಾಸ್ತಿ ಆಗುತ್ತೆ ಎಂದಿರುವ ವರಿಷ್ಠರು ಈ ಬಾರಿ ಡಿಸಿಎಂ ಸ್ಥಾನ ಯಾರಿಗೂ ಬೇಡ ಎಂದಿದ್ದಾರೆ.
ಇನ್ನು ಮಾಜಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರ ಹೆಸರು ಸಚಿವರ ಪಟ್ಟಿಯಲ್ಲಿ ಇಲ್ಲ ಎಂದು ಮೂಲಗಳು ತಿಳಿಸಿವೆ. ವಿಜಯೇಂದ್ರಗೆ ಸಚಿವ ಸ್ಥಾನ ಕೊಡಬೇಕು ಎಂದು ಯಡಿಯೂರಪ್ಪ ಪಟ್ಟು ಹಿಡಿದ್ದಿದ್ದಾರೆ ಎನ್ನಲಾಗಿದೆ.