ಆಸ್ಪತ್ರೆಗೆ ಹೋಗುತ್ತಿದ್ದ ದಂಪತಿ ಮಾರ್ಗಮಧ್ಯೆ ದುರಂತ ಸಾವು! ಏನೂ ಅರಿಯದ ಕಂದನಿಗೆ ಇದೆಂಥಾ ಶಿಕ್ಷೆ?

New Project
Published on

ಧಾರವಾಡ: ಎರಡು ಬೈಕ್​ ಮತ್ತು ಟಿಪ್ಪರ್​ ನಡುವೆ ಭೀಕರ ಅಫಘಾತ ಸಂಭವಿಸಿದ್ದು, ಸ್ಥಳದಲ್ಲೇ ದಂಪತಿ ಮೃತಪಟ್ಟ ಘಟನೆ ಧಾರವಾಡ ತಾಲೂಕಿನ ನವಲಗುಂದದಲ್ಲಿ ನಡೆದಿದೆ.

ನವಲಗುಂದ ತಾಲೂಕಿನ ಬೆಳವಟಗಿ ಗ್ರಾಮದ ಆನಂದ ಸಿದ್ದಗಿರಿ(35) ಮತ್ತು ಸುಷ್ಮಾ ಸಿದ್ದಗಿರಿ(32) ಮೃತ ದುರ್ದೈವಿಗಳು. ಈ ದಂಪತಿಯ ಮೂರು ವರ್ಷದ ಮಗ ಶರತ್​ಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಹಾಗಾಗಿ ಬೈಕ್​ನಲ್ಲಿ ಮಗನನ್ನು ಕರೆದುಕೊಂಡು ನವಲಗುಂದ ಆಸ್ಪತ್ರೆಗೆ ದಂಪತಿ ಹೋಗುತ್ತಿದ್ದರು. ಮಾರ್ಗಮಧ್ಯೆ ನವಲಗುಂದ-ನರಗುಂದ ರಸ್ತೆಯಲ್ಲಿ ಜವರಾಯನಂತೆ ಬಂದ ಟಿಪ್ಪರ್​ ದಂಪತಿಯ ಪ್ರಾಣ ತೆಗೆದಿದೆ. ಮಗು ಅಪಾಯದಿಂದ ಪಾರಾಗಿದೆ.

ಇದೇ ವೇಳೆ ಮತ್ತೊಂದು ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿದ್ದು, ಬೈಕ್​ ಸವಾರನ ಸ್ಥಿತಿ ಗಂಭೀರವಾಗಿದೆ. ಮಗು ಶರತ್​ಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮನೆಗೆ ಕರೆದೊಯ್ಯಲಾಗಿದೆ.  ಏನೂ ಅರಿಯದ ವಯಸ್ಸಲ್ಲಿ ಅಪ್ಪ-ಅಮ್ಮನನ್ನು ಕಳೆದುಕೊಂಡು ಮಗು ತಬ್ಬಲಿಯಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನವಲಗುಂದ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net