ಆಂಟಿ ಅಂದಿದ್ದಕ್ಕೆ ವೃದ್ಧನ ಕಪಾಳಕ್ಕೆ ಚಪ್ಪಲಿಯಿಂದ ಬಾರಿಸಿದ ಮಹಿಳೆ!

Old Woman
Published on

ಬೆಂಗಳೂರು: ಆಂಟಿ ಎಂದು ಕರೆದಿರುವುದಕ್ಕೆ ಆಕ್ರೋಶಗೊಂಡ ಮಹಿಳೆಯೊಬ್ಬಳು ಎಟಿಎಂ ಭದ್ರತಾ ಸಿಬ್ಬಂದಿ​​ಯಾಗಿರುವ ವೃದ್ಧನ ಕಪಾಳಕ್ಕೆ ಚಪ್ಪಲಿಯಿಂದ ಹೊಡೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಡೆದಿದ್ದೇನು?: ಕಳೆದ ಸೆಪ್ಟೆಂಬರ್ 19 ರಂದು ಮಲ್ಲೇಶ್ವರಂ ಠಾಣಾ ವ್ಯಾಪ್ತಿಯಲ್ಲಿನ ಎಟಿಎಂ ಘಟಕಕ್ಕೆ  ಹಣ ತುಂಬಲು ಅಧಿಕಾರಿಗಳು ಬಂದಿದ್ದರು. ಈ ವೇಳೆ ಅಡ್ಡ ನಿಂತಿದ್ದ ಮಹಿಳೆಗೆ " ಆಂಟಿ ಸೈಡಿಗೆ ಬನ್ನಿ" ಎಂದು 64 ವರ್ಷದ ಸೆಕ್ಯುರಿಟಿ ಗಾರ್ಡ್ ಕೃಷ್ಣಯ್ಯ ಹೇಳಿದ್ದಾರೆ. ಆಂಟಿ ಎಂದಿದ್ದಕ್ಕೆ ಸಿಟ್ಟಾದ ಮಹಿಳೆ ನನ್ನೆ ಆಂಟಿ ಅಂತೀಯಾ ಎಂದು ಸೆಕ್ಯುರಿಟಿ ಗಾರ್ಡ್​​​​​ ಕಪಾಳಕ್ಕೆ ಚಪ್ಪಲಿಯಿಂದ ಹೊಡೆದು ದಾಂಧಲೆ ಎಬ್ಬಿಸಿದ್ದಾಳೆ. ಒಂದು ವಾರದ ಹಿಂದೆ ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

" ಆಂಟಿ ಸೈಡಿಗೆ ಬನ್ನಿ" ಎಂದಿದ್ದಕ್ಕೆ ಅಶ್ವಿನಿ ಎಂಬ ಮಹಿಳೆಯೊಬ್ಬಳು, ನನ್ನೆ ಆಂಟಿ ಅಂತೀಯಾ ಎಂದು ಸದ್ಯ ಹಲ್ಲೆಗೊಳಗಾದ ಎಟಿಎಂ ಭದ್ರತಾ ಸಿಬ್ಬಂದಿ​​ ಆಗಿರುವ ನನ್ನ  ಕಪಾಳಕ್ಕೆ ಚಪ್ಪಲಿಯಿಂದ ಹೊಡೆದಿದ್ದಾಳೆ ಎಂದು ಕೃಷ್ಣಯ್ಯ ಬೆಂಗಳೂರಿನ ಮಲ್ಲೇಶ್ವರಂ ಠಾಣೆಗೆ ದೂರು ನೀಡಿದ್ದಾರೆ. ಅಶ್ವಿನಿ ಎಂಬ ಮಹಿಳೆ ವಿರುದ್ದ IPC 506.504.324.355 ರ ಅಡಿ ಕೇಸ್ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net